ಹೌದು ನೀವು ದಿನನಿತ್ಯ ತುಳಸಿ ಸೇವನೆ ಮಾಡುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳೇನು ಇಲ್ಲ. ಜ್ವರ, ವಿಷಮ ಶೀತ, ಶ್ವಾಸಕೋಶದ ಸೋಂಕು, ಕೆಮ್ಮು ಮತ್ತು ನೆಗಡಿ ಹೋಗಾಡಿಸಲು ಇದರಿಂದ ಸಾಧ್ಯ. ತುಳಸಿ ಕಷಾಯ ಕುಡಿದರೆ ದೇಹ ಸದೃಢವಾಗುವುದರೊಂದಿಗೆ ಹೊಟ್ಟೆ ಸಂಬಂಧಿ ರೋಗಳನ್ನು ದೂರವಿರಿಸಬಹುದು.

ಆರೋಗ್ಯದ ದೃಷ್ಟಿಕೋನದಿಂದ ಪ್ರತಿದಿನ ೫-೬ ಎಲೆಗಳನ್ನು ತಿನ್ನುವುದು ಉತ್ತಮ. ಇದರಿಂದ ರೋಗ ನಿರೋಧಕ ಶಕ್ತಿ ವೃದ್ದಿಯಾಗುವುದಲ್ಲದೆ ಬಾಯಿಯ ದುರ್ಗಂಧವು ಕೂಡಾ ನಿವಾರಣೆಯಾಗುತ್ತದೆ.

ತುಳಸಿ ಎಲೆಯ ರಸವನ್ನು ಎಣ್ಣೆಯಲ್ಲಿ ಕಾಯಿಸಿ ತಲೆಗೆ ಹಚ್ಚುವುದರಿಂದ ತಲೆಯಲ್ಲಿನ ಹೇನು, ಹೊಟ್ಟು ಬರುವಿಕೆ ಕೂಡಾ ನಿವಾರಣೆಯಾಗುತ್ತದೆ. ಹಾಗೆಯೇ ಹಲವು ವಿಧದ ಚರ್ಮ ಸಂಬಂಧಿ ರೋಗಗಳಿಂದಲೂ ನಿವಾರಣೆ ಮಾಡುತ್ತದೆ.

ತುಳಸಿ ಒಂದು ಉತ್ಕೃಷ್ಟ ರಸಾಯನವಾಗಿದೆ, ಇದು ಉಷ್ನ ಹಾಗು ತ್ರಿದೋಷ ಶಾಮಕವಾಗಿದೆ. ರಕ್ತವಿಕಾರ, ಜ್ವರ, ವಾಯು, ಕೆಮ್ಮು ಹಾಗು ಜಂತುನಾಶಕವಾಗಿದೆ ಅಲ್ಲದೆ ಹೃದಯಕ್ಕೆ ಹಿತಕಾರಿಯಾಗಿದೆ

LEAVE A REPLY

Please enter your comment!
Please enter your name here