ಜೀವವಿಲ್ಲದಿದ್ದರೂ ನಮ್ಮ ಶರೀರದಲ್ಲಿ ಉಗುರುಗಳು ಹಾಗು ಕೂದಲು ಮಾತ್ರ ಬೆಳೆಯುತ್ತಲೇ ಇರುತ್ತವೆ. ಕೂದಲುಗಳನ್ನಾದರೆ ಹೇರ್ ಕಟ್ಟಿಂಗ್ ಸೆಲೂನ್ ಇಲ್ಲವೇ ಪಾರ್ಲರ್ ಗಳಿಗೆ ಹೋಗಿ ಕತ್ತರಿಸಿಕೊಳ್ಳುತ್ತೇವೆ. ಉಗುರುಗಳನ್ನು ಮನೆಯಲ್ಲೇ ಕತ್ತರಿಸಿಕೊಳ್ಳುತ್ತೇವೆ. ಉಗುರುಗಳನ್ನು ಕೆಲವರು ಸ್ಟೈಲ್ ಗಾಗಿ ಬೆಳೆಸಿಕೊಂಡರೆ,ಕೆಲವರು ಚೆನ್ನಾಗಿ ಕಾಣಲೆಂದು ಬೆಳೆಸಿರುವುದನ್ನು ನಾವು ನೋಡಿರುತ್ತೇವೆ.

ಈಗ ನಾವು ಹೇಳಹೊರಟಿರುವುದು ಉಗುರುಗಳನ್ನು ಕತ್ತರಿಸುವುದರ ಬಗ್ಗೆ. ಉಗುರುಗಳು ಚಿಕ್ಕದಾಗಿರುವಾಗಲೇ ಕೆಲವರು ಕತ್ತಿಸಿಕೊಂಡರೆ,ಇನ್ನು ಕೆಲವರು ಉದ್ದವಾಗುವವರೆಗೂ ಕಾದು ನಂತರ ಕತ್ತರಿಸುತ್ತಾರೆ. ಕೆಲವರಂತೂ ಯಾವಾಗಲೂ ಕತ್ತರಿಸಿಕೊಳ್ಳುತ್ತಿರುತ್ತಾರೆ. ಉಗುರುಗಳನ್ನು ನೀವು ಹೇಗೇ ಕತ್ತರಿಸಿ,ಹಗಲು ವೇಳೆ ಮಾತ್ರ ಕತ್ತರಿಸಬೇಕಂತೆ… ರಾತ್ರಿ ವೇಳೆ ಕತ್ತರಿಸಲೇ ಬಾರದಂತೆ… ಯಾಕೆಂದರೇ…!

ಉಗುರುಗಳನ್ನು ರಾತ್ರಿವೇಳೆ ಕತ್ತರಿಸಬಾರದೆಂಬುದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಹಿಂದಿನ ಕಾಲದಲ್ಲಿ ಉಗುರುಗಳನ್ನು ಕತ್ತರಿಸಲು ಬ್ಲೇಡ್ ಇಲ್ಲವೆ ಕತ್ತರಿಗಳನ್ನು ಉಪಯೋಗಿಸುತ್ತಿದ್ದರು. ರಾತ್ರಿವೇಳೆ ಕತ್ತಲಿರುವುದರಿಂದ ,ಉಗುರುಗಳನ್ನು ಕತ್ತರಿಸಿದರೆ ಗಾಯಗಳಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ರಾತ್ರಿವೇಳೆ ಉಗುರುಗಳನ್ನು ಕತ್ತರಿಸಬಾರದೆಂದು ಅಂದಿನ ದಿನಗಳಲ್ಲಿ ಹೇಳುತ್ತಿದ್ದರು..


ಉಗುರುಗಳನ್ನು ರಾತ್ರಿವೇಳೆ ಕತ್ತರಿಸಬಾರದೆಂಬುದಕ್ಕೆ ಇರುವ ಮತ್ತೊಂದು ಕಾರಣವೆಂದರೆ… ರಾತ್ರಿ ವೇಳೆ ಕ್ಷುದ್ರ ಶಕ್ತಿಗಳನ್ನು ಆರಾಧಿಸುವವರು,ಮಾಯ,ಮಾಟ ಮಾಡುವವರು ತಿರುಗಾಡುತ್ತಿರುತ್ತಾರೆ. ಒಂದು ವೇಳೆ ನಾವು ಕತ್ತರಿಸಿದ ಉಗುರುಗಳು ಅವರಿಗೆ ದೊರೆತರೆ, ಮಾಟ ಮಾಡಿ ನಮಗೆ ಕೆಟ್ಟದಾಗುವಂತೆ ಮಾಡುವ ಸಾಧ್ಯತೆಯಿದೆ. ಆದುದರಿಂದ ಉಗುರುಗಳನ್ನು ರಾತ್ರಿವೇಳೆ ಕತ್ತರಿಸಬಾರದೆಂದು ಹೇಳುತ್ತಾರೆ. ಕಾರಣಗಳು ಏನೇಯಿದ್ದರೂ ಆರೋಗ್ಯ,ಶುಭ್ರತೆಗಾಗಿ ಉಗುರುಗಳನ್ನು ಕತ್ತರಿಸಲೇ ಬೇಕು. ಇಲ್ಲದಿದ್ದರೆ ಅನಾರೋಗ್ಯಕ್ಕೆ ಈಡಾಗುವ ಸಾಧ್ಯತೆಯಿದೆ ಎಂಬ ವಿಷಯ ಎಲ್ಲರಿಗೂ ತಿಳಿದಿದೆಯಲ್ಲವೇ.

 

LEAVE A REPLY

Please enter your comment!
Please enter your name here