ಹೌದು ಮಂಜರಾಬಾದ್ ಕೋಟೆಯನ್ನ ನೀವು ಕೇವಲ ಸಿನಿಮಾಗಳಲ್ಲಿ ನೋಡಿರಬಹುದು ಉದಾಹರಣೆಗೆ ಪರಮಾತ್ಮ ಸಿನಿಮಾದ ಪರವಶನಾದೆನು ಎಂಬ ಹಾಡಿನಲ್ಲಿ ಈ ಕೋಟೆಯನ್ನ ಮೇಲಿನಿಂದ ಹೇಗೆ ಕಣ್ಣುತ್ತೇ ಎಂದು ತೋರಿಸಿದ್ದಾರೆ. ಹೀಗೆ ಸಿನಿಮಾಗಳಲ್ಲಿ ಈ ಮಂಜರಾಬಾದ್ ಕೋಟೆಯನ್ನ ನೋಡಿದ ಮೇಲೆ ಹೆಚ್ಚಿನ ಜನರು ಈ ಕೋಟೆಯನ್ನ ವೀಕ್ಷಿಸಲು ಆಗಮಿಸುತ್ತಿದ್ದಾರೆ, ಈ ಕೋಟೆಯ ಬಗ್ಗೆ ನೀವು ತಿಳಿದುಕೊಳ್ಳ ಬೇಕು ಅನಿಸಿದ್ರೆ ಈ ಸ್ಟೋರಿಯನ್ನ ಸಂಪೂರ್ಣವಾಗಿ ಓದಿ.

ಈ ಮಂಜರಾಬಾದ್ ಕೋಟೆಯು ಬೆಂಗಳೂರಿನಿಂದ 221 ಕಿಲೋಮೀಟರ್ ದೊರದಲ್ಲಿದೆ. ಸಕಲೇಶಪುರದಿಂದ ಕೇವಲ 5 ಕಿಲೋಮೀಟರ್ ದೊರದಲ್ಲಿ ಈ ಸ್ಥಳವಿದೆ. ಈ ಕೋಟೆಯನ್ನ ತಲುಪುವುದಕ್ಕೆ 250 ಮೆಟ್ಟಿಲುಗಳನ್ನ ಹತ್ತಿ ಹೋಗಬೇಕು, ಸಮುದ್ರ ಮಟ್ಟದಿಂದ 3240 ಅಡಿ ಎತ್ತರದಲ್ಲಿ ಈ ಕೋಟೆಯನ್ನ ಕಟ್ಟಲಾಗಿದೆ. ಸುಮಾರು 5 ಎಕ್ಕರೆ ಪ್ರದೇಶದಲ್ಲಿ ನಕ್ಷತ್ರದ ಆಕಾರದಲ್ಲಿ ಇರುವ ಈ ಕೋಟೆ ನೋಡಲು ತುಂಬಾ ಸೊಗಸಾಗಿದೆ.

ಮಂಜರಾಬಾದ್ ಎಂಬ ಹೆಸರು ಯಾಕೆ…?

ಮೈಸೂರು ಹುಲಿ ಟಿಪ್ಪು ಸುಲ್ತಾನನು ಈ ಜಾಗಕ್ಕೆ ಹೋಗಿ, ಅಲ್ಲಿ ನಿಂತು ನೋಡಿದಾಗ ಸುಂದರವಾಗಿರುವ ಹಸಿರು ವನಸಿರಿಯನ್ನ ನೋಡಿ ಟಿಪ್ಪು ಸುಲ್ತಾನನ ಮನಸ್ಸು ಸಂತೃಪ್ತವಾಯಿತಂತೆ, ಆಗ ಟಿಪ್ಪು “ಮನ್ ಅಬಾದ್” ಎಂದು ಕೂಗಿದನು ಮನ್ ಅಬಾದ್ ಎಂದರೆ “ಮನಸ್ಸು ಸಂತೃಪ್ತವಾಯಿತು” ಎಂದು ಅರ್ಥ, ಅದೇ ಕಾರಣಕ್ಕೆ ಈ ಜಾಗವನ್ನ ಮಂಜರಾಬಾದ್ ಅನ್ನೋ ಹೆಸರಿನಿಂದ ಕರೆಯುತ್ತಾರೆ.

ಕೋಟೆ ಕಟ್ಟಲು ಕರಣ…?

ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆಯಲ್ಲಿದ್ದ ಸಮಯದಲ್ಲಿ ಮೈಸೂರಿನ ಗಡಿ ಭಾಗಗಳ ರಕ್ಷಣೆಗೋಸ್ಕರ ಕರಾವಳಿ ತೀರದಲ್ಲಿ ಈ ಕೋಟೆಯನ್ನ ಕಟ್ಟಿಸಿದ್ದನಂತೆ. ಈ ಕೋಟೆಯನ್ನ ಸೈನಿಕರು ವಿಶ್ರಾಂತಿ ಪಡೆಯೋದಕ್ಕೆ, ಮದ್ದು ಗುಂಡುಗಳನ್ನ ಸಂಗ್ರಹಿಸಲು ಕಟ್ಟಿಸಿದ್ದನಂತೆ, ಇಲ್ಲಿ ಎಲ್ಲ ಬಗೆಯ ಸವಲತ್ತುಗಳು ಇದ್ದವು ಎನ್ನಲಾಗಿದೆ.

ಟಿಪ್ಪುವಿಗೆ ಏಕೆ ಹೋಗಲು ಸಾಧ್ಯವಾಗಲಿಲ್ಲ…?

ಬಹಳಷ್ಟು ಯೋಜನೆಗಳನ್ನ ಮಾಡಿ ಸುರಕ್ಷಿತವಾಗಿ ನಿರ್ಮಿಸಿದ್ದ ಈ ಕೋಟೆ ಒಳಗಡೆ ಕುಳಿತು ಹೊರಗಿನ ಶತ್ರುಗಳನ್ನ ಗಮನಿಸಲು ಸಾಕಷ್ಟು ಬುದ್ದಿವಂತಿಕೆಯಿಂದ ಈ ಕೋಟೆಯನ್ನ ನಿರ್ಮಾಣ ಮಾಡಿದ್ದರು. ಆದ್ರೆ ಟಿಪ್ಪ್ಪು ಬ್ರಿಟಿಷರ ಜೊತೆ ನಡೆಸಿದ್ದ ಯುದ್ಧದಲ್ಲಿ ಸೋಲನ್ನ ಅನುಭವಿಸಿ ಶ್ರೀರಂಗಪಟ್ಟಣದ ಒಪ್ಪಂದ ಮಾಡಿಕೊಳ್ಳ ಬೇಕಾಗುತ್ತೆ ಇದಾದ ನಂತರ ಮಂಜರಾಬಾದ್ ಕೋಟೆಯು ಬ್ರಿಟಿಷರ ವಶವಾಯಿತು, ಇದರಿಂದಾಗಿಯೇ ಟಿಪ್ಪು ಮಂಜರಾಬಾದ್ ಕೋಟೆಗೆ ಹೆಚ್ಚುಬಾರಿ ಹೋಗಲು ಆಗಲಿಲ್ಲ.

ಮಂಜರಾಬಾದ್ ಕೋಟೆಯ ವಿನ್ಯಾಸ ಹೇಗಿದೆ ಗೊತ್ತಾ…?

ಆಗಿನ ಕಾಲದಲ್ಲೇ ಟಿಪ್ಪು ಸುಲ್ತಾನ್ ಈ ಮಂಜರಾಬಾದ್ ಕೋಟೆಯನ್ನ ಫ್ರೆಂಚ್ ಎಂಜಿನಿಯರ್ ಗಳ ಸಹಕಾರದ ಜೊತೆಗೆ ಕಟ್ಟಿಸಿದ್ದ, 8 ಮೂಲೆಗಳಿರೋ ಈ ಕೋಟೆ ಬಹಳ ಚನ್ನಾಗಿದೆ, ಮೇಲಿನಿಂದ ನೋಡಿದ್ರೆ ಈ ಕೋಟೆ ನಕ್ಷತ್ರಾಕಾರದಲ್ಲಿ ಕಾಣುತ್ತೆ . ಕೋಟೆಯ ಮದ್ಯದಲ್ಲಿ ಒಂದು ಬಾವಿ ಇದೆ. ಅಲ್ಲಲ್ಲಿ ಸುರಂಗ ಮಾರ್ಗಗಳನ್ನ ಸಹ ನಾವು ಕಾಣಬಹುದು. ಇಸ್ಲಾಮಿಕ್ ಶೈಲಿಯಲ್ಲಿ ಕಟ್ಟಿರುವ ಈ ಕೋಟೆಯಲ್ಲಿ ನೀರಿನ ಕೊಳ, ಊಟದ ಮನೆ, ಸ್ನಾನದ ಕೋಣೆ, ಹಾಗೂ ಮದ್ದು ಗುಂಡುಗಳನ್ನ ಸಂಗ್ರಹಿಸುತ್ತಿದ್ದ ಜಾಗಗಳನ್ನ ನೋಡಬಹುದು.

 

ಗೂಗಲ್ ಮ್ಯಾಪ್ :

LEAVE A REPLY

Please enter your comment!
Please enter your name here