ಎಣ್ಣೆ ತ್ವಚೆ, ಧೂಳು, ಮಾಲಿನ್ಯ ಹಾಗೂ ಹಾರ್ಮೋನ್‍ಗಳ ಬದಲಾವಣೆಯಿಂದ ತ್ವಚೆಯ ಮೇಲೆ ಗಣನೀಯ ಪರಿಣಾಮ ಉಂಟಾಗುತ್ತದೆ. ತ್ವಚೆ ಒಡೆಯುವುದು, ಬ್ಲ್ಯಾಕ್ ಹೆಡ್‌ಗಳ ಉತ್ಪತ್ತಿ, ಮೊಡವೆ ಹೀಗೆ ಅನೇಕ ಸಮಸ್ಯೆಗಳು ಕಿರಿಕಿರಿಯನ್ನುಂಟು ಮಾಡುತ್ತವೆ. ಅವುಗಳಲ್ಲಿ ಅಷ್ಟು ಸುಲಭವಾಗಿ ನಿವಾರಣೆ ಆಗದೆ ಕಾಡುವ ಸಮಸ್ಯೆಯೆಂದರೆ ಬ್ಲ್ಯಾಕ್‍ಹೆಡ್ಸ್.  ಬ್ಲ್ಯಾಕ್‍ಹೆಡ್ಸ್ ತ್ವಚೆಯಲ್ಲಿ ಅಡಗಿ ಕುಳಿತಂತೆ ಇರುತ್ತವೆಯಾದ್ದರಿಂದ ಇವುಗಳನ್ನು ಹೊರ ಹಾಕಲು ಸಾಕಷ್ಟು ಸಾಹಸ ಮಾಡಬೇಕು. ಇದಕ್ಕಾಗಿ ಪ್ರತಿ ವಾರ ಬ್ಯೂಟಿ ಪಾರ್ಲರ್ ಗೆ ಹೋಗಿ ವಿಶೇಷವಾದ ಚಿಕಿತ್ಸೆ ಪಡೆಯುವ ಬದಲು ಮನೆಯಲ್ಲಿ ಸಿಗುವ ಔಷಧೀಯ ವಸ್ತುಗಳಿಂದ ಪರಿಹಾರ ಕಂಡುಕೊಳ್ಳ ಬಹುದು.

ಟೂತ್‍ಪೇಸ್ಟ್

* ಯಾವುದಾದರೂ ಬಿಳಿಬಣ್ಣದ ಟೂತ್‍ಪೇಸ್ಟ್

* ಒಂದು ಹಳೆಯ ಬ್ರೆಶ್

ಮುಖದ ಮೇಲಿರುವ ಬ್ಲ್ಯಾಕ್‍ಹೆಡ್ಸ್ ಪ್ರದೇಶದಲ್ಲಿ ಪೇಸ್ಟ್‍ಅನ್ನುಹಚ್ಚಿ ಹಳೆಯ ಬ್ರೆಶ್‍ನಿಂದ ಬ್ಲ್ಯಾಕ್ ಹೆಡ್ಸ್ ಪ್ರದೇಶದಲ್ಲಿ 5-7 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ತಣ್ಣೀರಿನಲ್ಲಿ ತೊಳೆಯಿರಿ. ಯಾವುದೇ ಕಾರಣಕ್ಕೂ ಹೊಸ ಅಥವಾ ಒರಟಾದ ಬ್ರೆಶ್ ಬಳಸದಿರಿ. ಇದು ತ್ವಚೆಯ ಮೇಲೆ ಹಯವನ್ನು ಉಂಟು ಮಾಡುತ್ತದೆ.

ಅಲೋವೆರಾ ಜೆಲ್

ಅಲೋವೆರಾ ಎಲೆಯೊಳಗಿರುವ ಜೆಲ್‍ಅನ್ನು ತೆಗೆದು ಬ್ಲ್ಯಾಕ್‍ಹೆಡ್ಸ್ ಮೇಲೆ ಹಚ್ಚಿ 15 ನಿಮಿಷದ ಬಳಿಕ ತೊಳೆಯಿರಿ. ಹೀಗೆ ಮಾಡುವುದರಿಂದ ತ್ವಚೆಗೆ ಉತ್ತಮ ಆರೈಕೆ ದೊರೆಯುವುದು. ಅಲ್ಲದೆ ಬ್ಲ್ಯಾಕ್ ಹೆಡ್‌ಗಳಿಂದ ಮುಕ್ತಿ ಹೊಂದಬಹುದು.

ಮೊಟ್ಟೆಯ ಬಿಳಿ ಭಾಗ

ಮೊಟ್ಟೆಯ ಬಿಳಿ ಭಾಗವನ್ನ ಬ್ಲ್ಯಾಕ್‍ಹೆಡ್ಸ್ ಇರುವ ಜಾಗಕ್ಕೆ ಹಚ್ಚಿ ಅದರ ಮೇಲೆ ಟಿಶ್ಯೂ ಪೇಪರ್ ಅನ್ನು ತೆಳುವಾಗಿ ಅಂಟಿಸಿ ನಂತರ ಮತ್ತೆ ಅದರ ಮೇಲೆ ಮೊಟ್ಟೆಯ ಬಿಳಿ ಭಾಗವನ್ನ ಹಚ್ಚಿ ಒಣಗಲು ಬಿಡಿ. ಅದು ಒಣಗಿದ ನಂತರ ನಿದಾನವಾಗು ಪದರದಂತೆ ತೆಗೆಯಿರಿ. ಇದರಿಂದ ಸುಲಭವಾಗಿ ಬ್ಲ್ಯಾಕ್‍ಹೆಡ್ಸ್ ನಿವಾರಣೆಯಾಗುತ್ತವೆ.

LEAVE A REPLY

Please enter your comment!
Please enter your name here