ಹೌದು ಇದೇನಪ್ಪ ಎಲ್ಲ ಗ್ರಾಮಗಳಲ್ಲಿ ಪುರಾಣದ ದೇವರನ್ನು ಪೂಜಿಸುತ್ತಾರೆ. ಆದರೆ ಇಲ್ಲಿ ಗಾಂಧಿಯನ್ನೇ ದೇವರ ರೂಪದಲ್ಲಿ ಕಾಣುತ್ತಾರೆ ಏನಿದು ವಿಶೇಷ ಅಂತಿದ್ದೀರಾ? ಹೌದು ಈ ಗ್ರಾಮದಲ್ಲಿ ಗಾಂಧಿಯನ್ನು ಪೂಜಿಸುವುದು ವಿಶೇಷನೇ ಆದರೆ ಯಾಕೆ ಗಾಂಧಿಯನ್ನೇ ಪೂಜಿಸುತ್ತಾರೆ ಅನ್ನೋದು ನಿಮಗೆ ಗೊತ್ತಾಗಲೇ ಬೇಕು.

ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಕೇದರೀಪುರಂ ಗ್ರಾಮದಲ್ಲಿ ಗ್ರಾಮ ದೇವತೆಯನ್ನು ಇಲ್ಲಿನ ಜನ ಪೂಜಿಸುತ್ತಾರೆ. ಆದರೆ ವಿಚಿತ್ರವೆಂದರೆ ಇಲ್ಲಿ ಪೂಜೆ ಮಾಡುವುದು ಪುರಾಣದ ದೇವರನ್ನಲ್ಲ, ಬದಲಿಗೆ ಮಹಾತ್ಮಾ ಗಾಂಧಿಯನ್ನು. ಗಾಂಧಿಯನ್ನು ದೇವರ ರೂಪದಲ್ಲಿ ಕಾಣುವ ಇವರು ಪ್ರತಿ ಖಾರಿಫ್ ಋತುವಿನಲ್ಲಿ ಕೃಷಿ ಚಟುವಟಿಕೆ ಆರಂಭಿಸುವ ಮೊದಲು ಇಲ್ಲಿನ ಗ್ರಾಮಸ್ಥರು ಗಾಂದಮ್ಮ ಉತ್ಸವವನ್ನುಆಚರಿಸುತ್ತಾರೆ. ಅಲ್ಲದೆ ಗಾಂಧಿಯನ್ನು ಪೂಜಿಸಿದರೆ ಉತ್ತಮ ಬೆಳೆಯಾಗುತ್ತದೆ ಎಂಬ ನಂಬಿಕೆ ಈ ಊರಿನ ಗ್ರಾಮಸ್ಥರದ್ದು.

1947 ರ ನಂತರ ಸ್ವಾತಂತ್ರ್ಯ ಸಿಕ್ಕ ಮೇಲೆ ಈ ಊರಿನ ಪೂರ್ವಜರು ಗಾಂಧಿಯನ್ನು ಪೂಜಿಸುತ್ತಲೇ ಬಂದಿದ್ದರಂತೆ. ಈ ಊರಿನವರು ಗಾಂಧಮ್ಮ ಉತ್ಸವ ಮಾಡಲು ಕಾರಣವೇನು ಗೊತ್ತಾ? ಉತ್ಸವದ ಮೂಲ ಇನಾಂದಾರಿ ವ್ಯವಸ್ಥೆಯಲ್ಲಿದೆ. ಆಳ್ವಿಕೆ ನಡೆಸುತ್ತಿದ್ದವರು ಹಿಂದೆ 250 ಎಕರೆ ಜಮೀನನ್ನು ಸ್ಥಳೀಯ ಮುಖಂಡ ಪರಶುರಾಮ ಮತ್ತು ವೆಂಕಟ ರಾಮ ಚೌಧರಿ ಎಂಬವರಿಗೆ ನೀಡಿದ್ದರಂತೆ. ಅವರು ಜಮೀನನ್ನು ರೈತರಿಗೆ ನೀಡಿ ಬೆಳೆ ಬೆಳೆಯುವಂತೆ ಮಾಡಿದರು ಎನ್ನುತ್ತಾರೆ. ಹಾಗು ಇನಾಂದಾರರ ವಿರುದ್ಧ ಗ್ರಾಮಸ್ಥರ ಒಗ್ಗಟ್ಟನ್ನು ತೋರಿಸಲು ಉತ್ಸವದ ಆಚರಣೆಯನ್ನು ಆರಂಭಿಸಲಾಯಿತು ಅದೀಗ ಸಂಪ್ರದಾಯವಾಗಿ ಮುಂದುವರಿದಿದೆ ಎಂಬುದಾಗಿ ಅಲ್ಲಿಯ ಸ್ಥಳೀಯರು ಹೇಳುತ್ತಾರೆ.

ಈ ಊರಿನ ಹಿರಿಯರು ಮಹಾತ್ಮಾ ಗಾಂಧಿಯವರಿಂದ ಸ್ಫೂರ್ತಿ ಪಡೆದು ಸತ್ಯಾಗ್ರಹ ನಡೆಸಿ ಭೂಮಿ ಪಡೆದರು. ಗ್ರಾಮದಲ್ಲಿ ಗಾಂಧಿ ಯುವ ಸಂಘಟನೆ ಮತ್ತೆ ಗಾಂಧಿ ಸಹಾಯ ಶಾಲೆಯನ್ನು ಕೂಡ ನಿರ್ಮಿಸಲಾಗಿದೆ” ಅದೇನೇ ಇರಲಿ ಗಾಂಧಿಯವರಿಂದ ಸ್ಪೂರ್ತಿ ಪಡೆದ ಈ ಊರಿನ ಹಿರಿಯರು ಅಂದು ಆಚರಿಸಿಕೊಂಡು ಬಂದಂತ ಪದ್ದತಿಯನ್ನು ಇಂದಿಗೂ ಆಚರಿಸಿಕೊಡು ಹೋಗುತ್ತಿದ್ದರೆ.

LEAVE A REPLY

Please enter your comment!
Please enter your name here