ದೇಶದಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ, ಸಾವಿರಾರು ಕೋಟಿ ಮೌಲ್ಯದ ಹಗರಣಗಳು! ರಾಜಕಾರಣಿಗಳ ಬೇನಾಮಿ ಆಸ್ತಿಗಳ ಬಗ್ಗೆ ನಿಮಗೆ ಕೇಳಿ ಕೇಳಿ ಸಾಕಾಗಿರುತ್ತದೆ.. ಆದರೆ ನಾವು ಈಗ ಹೇಳಲು ಹೊರಟಿರುವ ಸುದ್ದಿ ಕೇಳಿದರೆ ಇಂತಹ ಕಾಲದಲ್ಲಿಯೂ ಇಂತಹ ಪ್ರಾಮಾಣಿಕ ರಾಜಕಾರಣಿ ಇರುತ್ತಾರೆಯೇ ಎಂದು ನಿಮ್ಮಲ್ಲಿ ಪ್ರಶ್ನೆ ಮೂಡುತ್ತದೆ. ಹೌದು ಅವರೇ ತ್ರಿಪುರಾದ ಮಾಜಿ ಮುಖ್ಯಮಂತ್ರಿ ಶ್ರೀಯುತ ಮಾಣಿಕ್ ಸರ್ಕಾರ್.

ಮಾಣಿಕ್ ಸರ್ಕಾರ್ ತ್ರಿಪುರಾದಲ್ಲಿ ಸುಮಾರು 30 ವರ್ಷಗಳ ಕಾಲ ಪ್ರಾಮಾಣಿಕ ಮುಖ್ಯಮಂತ್ರಿಯಾಗಿ ಕೆಲಸ ನಿರ್ವಹಿಸಿದ್ದರು. ಅಂದಹಾಗೆ ಇಷ್ಟು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ವ್ಯಕ್ತಿಯ ಹತ್ತಿರ ಒಂದು ಸ್ವಂತ ಮನೆಯೂ ಇಲ್ಲ ! ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಿರುವ ಮಾಣಿಕ್ ಸರ್ಕಾರ್ ತಮ್ಮ ಸಿಎಂ ನಿವಾಸವನ್ನ ಖಾಲಿ ಮಾಡಿ ಪಕ್ಷದ ಅತಿಥಿ ಗೃಹಕ್ಕೆ ಸ್ಥಳಾಂತರವಾಗಿದ್ದಾರೆ. ಸಿಪಿಎಂ ಪಕ್ಷದ ನಾಯಕ ಬಿಜನ್ ಧಾರ್ ಇದಕ್ಕೆ ಪ್ರತಿಕ್ರಿಯಿಸಿ, ಶ್ರೀಯುತ ಮಾಣಿಕ್ ಸರ್ಕಾರ್ ಮತ್ತು ಅವರ ಪತ್ನಿ ಪಾಂಚಾಲಿ ಭಟ್ಟಾಚಾರ್ಯರೊಂದಿಗೆ ಪಕ್ಷದ ಕಚೇರಿ ಅತಿಥಿ ಗೃಹವೊಂದರಲ್ಲಿ ವಾಸಿಸಲಿದ್ದಾರೆ ಎಂದು ಹೇಳಿದರು.

ಸಿಪಿಎಂ ಅತಿಥಿ ಗೃಹಕ್ಕೆ ತೆರಳಿದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್, ನನಗೆ ಪಕ್ಷದ ಕಚೇರಿಯಲ್ಲಿ ಮಾಡುವ ಅಡುಗೆಯನ್ನೇ ಕೊಡಿ ಎಂದು ಅಡುಗೆ ಮಾಡುವ ಸಿಬ್ಬಂದಿಗೆ ಹೇಳಿದ್ದಾರೆ.


ಮಾಣಿಕ್ ಅವರ ಪತ್ನಿ ಪಾಂಚಾಲಿ ತಮ್ಮ ಪುಸ್ತಕಗಳನ್ನು ಪಕ್ಷದ ಗ್ರಂಥಾಲಯ ಮತ್ತು ಅಗರ್ತಲದ ಬಿರ್‍ಚಂದ್ರ ಕೇಂದ್ರ ಗ್ರಂಥಾಲಯಕ್ಕೆ ಕೊಡಲಾಗುವುದು ಎಂದು ಹೇಳಿದ್ದರು. ದಂಪತಿಗೆ ಮಕ್ಕಳಿರದ ಕಾರಣ, ತಮ್ಮ 900 ಚದರ ಅಡಿ ಆಸ್ತಿಯನ್ನ ಸಂಬಂಧಿಕರಿಗೆ ನೀಡಿದ್ದಾರೆ. ಮಾಣಿಕ್ ಸರ್ಕಾರ್ ತಮ್ಮ ರಾಜಕೀಯ ಬದುಕಿನಲ್ಲಿ ಸಂಪಾದಿಸಿದ ಆಸ್ತಿ ಇದೊಂದೆ ಆಗಿದೆ.

ಮಾಣಿಕ್ ಸರ್ಕಾರ್ ರವರ ಬಳಿ 1,520 ರೂ. ಹಣವಿದ್ದು ಮತ್ತು 2,410 ರೂ. ಎಸ್‍ಬಿಐ ಬ್ಯಾಂಕ್ ಖಾತೆಯಲ್ಲಿ ಇದೆ ಎಂದು ಚುನಾವಣಾ ಸಮಯದಲ್ಲಿ ಅಫಿಡೆವಿಟ್ ಸಲ್ಲಿಸಿದ್ದರು  2013 ರಲ್ಲಿ ಬ್ಯಾಂಕ್ ಖಾತೆಯಲ್ಲಿ 9,720 ರೂ. ಇತ್ತು ಎಂದು ಉಲ್ಲೇಖಿಸಿದ್ದರು.

ಸ್ವಂತ ಮನೆಯನ್ನ ಕೂಡ ಹೊಂದದ ಮಾಣಿಕ್ ಅವರು, ಅಗರ್ತಲದ ಕೃಷ್ಣ ನಗರದಲ್ಲಿ ಇರುವ ಸ್ಥಿರ ಆಸ್ತಿಯಾದ 0.0118 ಎಕರೆ ಕೃಷಿಯೇತರ ಭೂಮಿಯ ಹೊಂದಿದ್ದಾರೆ. ಈ ಆಸ್ತಿಯು ಸ್ವಾಮ್ಯ ಹಕ್ಕನ್ನು ಅವರ ಸಹೋದರ ಮತ್ತು ಸಹೋದರಿಯರು ಹೊಂದಿದ್ದಾರೆ. ಮೊಬೈಲ್ ಫೋನ್ ಇಲ್ಲದ ಇವರು ತಮ್ಮ ಪ್ರತಿ ತಿಂಗಳ ವೇತನವನ್ನ (26,315 ರೂ) ಪಕ್ಷದ ನಿಧಿಗೆ ದಾನ ಮಾಡಿ ಉಳಿದ 9,700 ರೂ ಗಳನ್ನು ಬಳಸುತ್ತಿದ್ದರು.

 

LEAVE A REPLY

Please enter your comment!
Please enter your name here