ಇಂದಿನ ಕಾಲದಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವು ಒತ್ತಡ. ಅಧಿಕ ಒತ್ತಡದಿಂದಾಗಿ ಹಲವಾರು ಅರೋಗ್ಯ ಸಮಸ್ಯೆಗಳು ಸಹ ಹೆಚ್ಚಾಗಿವೆ, ಕೂದಲು ಉದುರುವಿಕೆ ಎನ್ನುವುದು ಇಂದಿನ ಪ್ರಮುಖ ಸಮಸ್ಯೆಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ತಲೆ ಹೊಟ್ಟಿನಿಂದಲೂ ಸಹ ಕೂದಲು ಉದುರುವಿಕೆ ಹೆಚ್ಚಾಗುತ್ತದೆ. ಎಣ್ಣೆ ಪದಾರ್ಥಗಳನ್ನು ಜಾಸ್ತಿ ಸೇವಿಸುವುದರಿಂದಲೂ ಹೊಟ್ಟಿನ ಸಮಸ್ಯೆ ಹೆಚ್ಚುತ್ತದೆ. ಒತ್ತಡ ಹೆಚ್ಚಾದರೂ ತಲೆಹೊಟ್ಟು ಹೆಚ್ಚುತ್ತದೆ ಚಾಕೋಲೇಟ್, ಸಕ್ಕರೆ, ಮಾಂಸ, ಬ್ರೆಡ್, ಚೀಸ್, ವೈನ್ ಮುಂತಾದ ಪದಾರ್ಥಗಳಿಂದ ಆದಷ್ಟು ದೂರವಿರಿ. ನೀರನ್ನು ಹೆಚ್ಚಾಗಿ ಕುಡಿಯಿರಿ.

ತಲೆಹೊಟ್ಟನ್ನ ಹೋಗಲಾಡಿಸಲು ಹೀಗೆ ಮಾಡಿ.

ನಿಂಬೆರಸ ಹೊಟ್ಟು ನಿವಾರಣೆಗೆ ಸಹಕಾರಿಯಾಗಿದೆ. ಎರಡು ಚಮಚ ನಿಂಬೆರಸವನ್ನು ಒಂದು ಲೋಟ ನೀರಿಗೆ ಹಾಕಿ ಮಿಶ್ರಮಾಡಿ. ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ತಲೆಸ್ನಾನ ಮಾಡಿ.

ಕೂದಲಿನ ಸೌಂದರ್ಯ ವರ್ಧನೆಗೆಂದು ಕೃತಕ ಬಣ್ಣಗಳನ್ನು ಬಳಸುವುದು, ರಾಸಾಯನಿಕ ಮಿಶ್ರಿತ ಶಾಂಪೂ ಬಳಸುವುದು ಸಹ ಹೊಟ್ಟಿಗೆ ಕಾರಣವಾಗಬಹುದು. ಇವುಗಳಿಂದ ಆದಷ್ಟು ದೂರವಿರಿ. ಹರಳೆಣ್ಣೆಯನ್ನು ಸ್ವಲ್ಪ ಬಿಸಿಮಾಡಿ ತಲೆಗೂದಲ ಬುಡಕ್ಕೆ ತಾಗುವಂತೆ ಹಾಕಿ ಬೆರಳಿನಿ೦ದ ಮಸಾಜ್ ಮಾಡಿ. ಇದರಿಂದ ಕೂದಲ ಬುಡಕ್ಕೆ ಹೆಚ್ಚಿನ ರಕ್ತ ಸಂಚಾರವಾಗುವ ಮೂಲಕ ಸೋಂಕು ಕಡಿಮೆಯಾಗುತ್ತದೆ. ಎಣ್ಣೆ ಹಚ್ಚಿದ ಬಳಿಕ ಕನಿಷ್ಟ ಒಂದು ಗಂಟೆ ಬಿಟ್ಟು ಶಾಂಪುವಿನಲ್ಲಿ ಉಗುರು ಬೆಚ್ಚನೆಯ ನೀರು ಬಳಸಿ ಸ್ನಾನ ಮಾಡಿ.

ಅತಿಯಾದ ತಲೆಹೊಟ್ಟಿದ್ದರೆ ಮೊಸರು, ನಿ೦ಬೆ ಮತ್ತು ಜೇನನ್ನು ಸಮಪ್ರಮಾಣದಲ್ಲಿ ಬೆರೆಸಿ ತಲೆಗೂದಲ ಬುಡಕ್ಕೆ ದಪ್ಪನಾಗಿ ಹಚ್ಚಿ. ಒ೦ದು ಗ೦ಟೆ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ.

LEAVE A REPLY

Please enter your comment!
Please enter your name here