ಮಸಾಲೆ ಬೇಕಾಗುವ ಸಾಮಾಗ್ರಿಗಳು

ಒಣಮೆಣಸು

ಕೊಬ್ಬರಿ ತುರಿ

ದನಿಯಾ

ಜೀರಿಗೆ

ಚಕ್ಕೆ,

ಕಡಲೇಬೇಳೆ

ಉದ್ದಿನಬೇಳೆ

ಮೆಂತೆ

ಲವಂಗ

ಅರಿಶಿನ

ಮಸಾಲೆ ಅಲ್ಲದ ಪದಾರ್ಥಗಳು

ಬದನೆಕಾಯಿ

ಈರುಳ್ಳಿ

ಕರಿಬೇವು

ಹುಣಸೇಹಣ್ಣು

ಎಣ್ಣೆ

ಮಾಡುವ ವಿಧಾನ…

ಮೊದಲನೆಯದಾಗಿ ಬಾಣಲೆಯನ್ನು ಬಿಸಿ ಮಾಡಿ, ಮೇಲೆ ಹೇಳಿರುವ ಎಲ್ಲಾ ಮಸಾಲೆ ಪದಾರ್ತಗಳನ್ನು ಒಂದೊಂದಾಗಿ ಹುರಿದು ಬಳಿಕ ಚೂರು ನೀರು ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಬದನೆಕಾಯಿಯನ್ನು ಬಾಗಗಳಾಗಿ ಸೀಳಬೇಕು ಹೋಳು ಬೇರೆಯಾಗಬಾರದು ಇದಕ್ಕೆ ರುಬ್ಬಿದ ಮಸಾಲೆಯನ್ನು ತುಂಬಬೇಕು. ಬಳಿಕ ಒಂದು ಬಾಣಲೆಗೆ ೨-೩ ಚಮಚ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಕರಿಬೇವು, ಈರುಳ್ಳಿ ಹಾಕಿ ಬಾಡಿಸಿಕೊಂಡ ಮೇಲೆ ಮಸಾಲೆ ತುಂಬಿದ ಬದನೆಕಾಯಿ, ಚೂರು ನೀರು, ಹುಣಸೇಹುಳಿ, ಬೆಲ್ಲ, ಉಪ್ಪು ಹಾಕಿ ಸಣ್ಣ ಉರಿಯಲ್ಲಿ ತಿರುವಿ ಹಾಕುತ್ತಾ ಬೇಯಿಸಿದರೆ ಬದನೆಕಾಯಿ ಎಣ್ಣೆಗಾಯಿ ರೆಡಿ ಇರುತ್ತದೆ.

LEAVE A REPLY

Please enter your comment!
Please enter your name here