ಸಾಮಾನ್ಯವಾಗಿ ನಾವು ಬಿಳಿ ಅಕ್ಕಿ ನೋಡಿರ್ತೀವಿ, ಇದೇನಪ್ಪ ಕೆಂಪಕ್ಕಿ ಅಂತ ಹುಬ್ಬೇರಿಸಿ ನೋಡ್ತಾ ಇದ್ದೀರಾ…? ಹೌದು ಕೆಂಪಕ್ಕಿ  ಇದನ್ನ ಕುಚ್ಚಲಕ್ಕಿ ಅಂತಲೂ ಕರೆಯುತ್ತಾರೆ. ನಮ್ಮ ಕರಾವಳಿ ಭಾಗದಲ್ಲಿ ಈ ಕೆಂಪಕ್ಕಿಯನ್ನ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಕರ್ನಾಟಕದ ಉತ್ತರ ಭಾಗಕ್ಕೆ ಬಂದರೆ ಇಲ್ಲಿ ಹೆಚ್ಚಾಗಿ ಬಿಳಿ ಅಕ್ಕಿಯನ್ನ ಸೇವಿಸುತ್ತಾರೆ. ಈ ಕೆಂಪಕ್ಕೆ ಆರೋಗ್ಯಕ್ಕೆ ತುಂಬಾ ಉಪಯುಕ್ತಕಾರಿ.

* ಕೆಂಪಕ್ಕಿಯು ಉತ್ತಮವಾದ ನಾರಿನಂಶವನ್ನ ಹೊಂದಿದೆ. ನಾರಿನಂಶವು ನಮ್ಮ ದೇಹಕ್ಕೆ ಅತಿ ಅಗತ್ಯವಾಗಿ ಬೇಕು.ಜೀರ್ಣಕ್ರಿಯೆಗೆ ಇದು ತುಂಬಾ ಉಪಯೋಗಕಾರಿ.

* ಮ್ಯಾಗ್ನಿಶಿಯಂ ಎನ್ನುವುದು ನಮ್ಮ ದೇಹಕ್ಕೆ ಬೇಕಾದ ಶಕ್ತಿ ಒದಗಿಸುವ ಮತ್ತು ಆಂಟಿ ಆಕ್ಸಿಡೆಂಟ್ ಒದಗಿಸುವ ಶಕ್ತಿ ಕೆಂಪಕ್ಕಿಗಿದೆ. ಇದು ಎಲುಬಿನ ಬೆಳವಣಿಗೆ, ಮಾಂಸಖಂಡಗಳ ಸಡಿಲಿಕೆ, ಅಂಗಾಂಶ ಉತ್ಪಾದನೆಗೆ ಅಗತ್ಯವಾದ ಅಂಶವನ್ನ ಹೊಂದಿದೆ.

* ಕುಚ್ಚಿಲು ಅಕ್ಕಿ ಸಕ್ಕರೆ ಅಂಶವನ್ನು ಸ್ಥಿರವಾಗಿರಿಸುತ್ತದೆ ಅದಕ್ಕಾಗಿಯೇ ಇದು ಮಧುಮೇಹಿಗಳಿಗೆ ಉತ್ತಮವಾದದ್ದು. ಅಲ್ಲದೆ ಇದು ದೇಹವನ್ನು ತಂಪಾಗಿರುವಂತೆ ನೋಡಿಕೊಳ್ಳುತ್ತದೆ.

* ಕುಚ್ಚಿಲು ಅಕ್ಕಿಯಲ್ಲಿ ಪೋಷಕಾಂಶಗಳ ಪ್ರಮಾಣ ಹೆಚ್ಚಿದೆ. ಇದು ಮಧುಮೇಹ ನಿಯಂತ್ರಿಸುವುದಲ್ಲದೆ, ದೇಹಕ್ಕೆ ಬೇಕಾದ ಶಕ್ತಿ ಒದಗಿಸುತ್ತದೆ.

LEAVE A REPLY

Please enter your comment!
Please enter your name here