ಈಗಿನ ಜಂಜಾಟದ ಹಾಗು ಒತ್ತಡದ ಜೀವನ ಶೈಲಿಯಲ್ಲಿ ನಮಗೆ ಸರಿಗಿ ನಿದ್ದೆ ಮಾಡಲು ಸಹ ಸಮಯ ಸಿಗುವುದಿಲ್ಲ, ಅಕಸ್ಮಾತ್ ಸಿಕ್ಕರೂ ಸರಿಯಾಗಿ ನಿದ್ದೆ ಬರುವುದಿಲ್ಲ ಎಂಬುದು ಒಬ್ಬಿಬ್ಬರು ದೂರುವ ದೂರಲ್ಲ ಸಾಕಷ್ಟು ಜನರಾದ ದೂರಾಗಿದೆ. ನಿದ್ದೆ ಸರಿಯಾಗಿ ಬರುವಂತೆ ಮಾಡಲು ಇಲ್ಲಿ ನಾವು ತಿಳಿಸಿರುವ ಕೆಲವು ಆಹಾರಗನನ್ನ ಸೇವಿಸಿ ನೋಡಿ.

* ಬಾಳೆ ಹಣ್ಣು

ರಾತ್ರಿ ಮಲಗುವ ಮುಂಚೆ ಬಾಳೆ ಹಣ್ಣು ತಿಂದು ಹಾಲು ಕುಡಿಯುವ ಅಭ್ಯಾಸ ಕೆಲವರಿಗೆ ಇರುತ್ತದೆ. ಬಾಳೆ ಹಣ್ಣಿನಲ್ಲಿ ಪೊಟೇಷಿಯಂ ಮತ್ತು ಮ್ಯಾಗ್ನಿಶಿಯಂ ಅಂಶ ಸಾಕಷ್ಟಿದ್ದು, ಇದು ಮಾಂಸ ಖಂಡಗಳು ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ. ಇದರಿಂದ ಸುಖ ನಿದ್ರೆ ನಿಮ್ಮದಾಗಬಹುದು.

* ಬಾದಾಮಿ

ರಾತ್ರಿ ಮಲಗುವ ಮುಂಚೆ ಬಾದಾಮಿ ತಿನ್ನುವುದು ಒಳ್ಳೆಯದು. ಬಾದಾಮಿಯಲ್ಲಿರುವ ಮ್ಯಾಗ್ನಿಶಿಯಂ ಅಂಶ ನಮ್ಮನ್ನು ಸುಖ ನಿದ್ರೆಗೆ ದೂಡುವುದಲ್ಲದೆ, ದೇಹದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿಡುತ್ತದೆ.

* ಸಿಹಿ ಗೆಣಸು

ಪ್ರತಿ ದಿನ ಸಿಹಿ ಹೇನಾಸಂನ ಸೇವಿಸಿ. ಸಿಹಿ ಗೆಣಸಿನಲ್ಲಿ ಸಾಕಷ್ಟು ಕಾರ್ಬೋ ಹೈಡ್ರೇಟ್ ಮತ್ತು ಪೊಟೇಶಿಯಂ ಇದೆ. ಇದು ಮಾಂಸಖಂಡಗಳು ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ.

* ಚೆರ್ರಿ ಹಣ್ಣು

ಚೆರ್ರಿ ಹಣ್ಣಿನಲ್ಲಿ ಮೆಲಟಿನ್ ಅಂಶ ಹೇರಳವಾಗಿರುತ್ತದೆ. ಇದು ನಮ್ಮ ನಿದ್ರೆಯ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ. ಪ್ರತಿ ನಿತ್ಯ ಇದರ ಜ್ಯೂಸ್ ಕುಡಿದರೂ ಸಾಕು. ಸುಖ ನಿದ್ರೆ ನಿಮ್ಮದಾಗುತ್ತದೆ

 

 

LEAVE A REPLY

Please enter your comment!
Please enter your name here