ಹೌದು ಇದು ವಿಚಿತ್ರ ಅನಿಸಿದರೂ ಸತ್ಯ ಈಊರಿನ ಜನರ ಹೆಸರುಗಳು. ದೇಶದ ಅತ್ಯುನ್ನತ ಹುದ್ದೆಗಳು, ಖ್ಯಾತನಾಮರ ಮತ್ತು ಪ್ರಖ್ಯಾತ ಕಂಪೆನಿಗಳ ಹೆಸರುಗಳನ್ನು ಇಲ್ಲಿ ಜನರಿಗೆ ಇಡುತ್ತಾರೆ. ಸಿಮ್ ಕಾರ್ಡು, ಚಿಪ್, ಜಿಯೊನಿ, ಮಿಸ್ ಕಾಲ್, ರಾಜ್ಯಪಾಲ, ಹೈಕೋರ್ಟ್ ಇತ್ಯಾದಿ ಹೆಸರುಗಳೂ ಮನುಷ್ಯರಿಗಿವೆ. ಎಲ್ಲಿ, ಯಾಕೆ ಹೇಗೆ ಅನ್ನೋ ನಿಮ್ಮ ಕುತೂಹಲಕ್ಕೆ ಮುಂದೆ ಉತ್ತರ ಸಿಗುತ್ತದೆ ನೋಡಿ.

ಈ ಊರಿನ ಜನರು ಅನಕ್ಷರಸ್ಥರು ಆದರೂ ಇವರ ಹೆಸರುಗಳು ಪ್ರಧಾನ ಮಂತ್ರಿ. ರಾಷ್ಟ್ರಪತಿ, ಮುಖ್ಯಮಂತ್ರಿ. ಎಂಬುದಾಗಿ ಅಲ್ಲಿ ಪ್ರಧಾನ ಮಂತ್ರಿ ಎಲ್ಲೋಗಿದ್ದಾರೆ ಎಂಬುದಾಗಿ ಕೇಳಿದರೆ ಕುರಿ ಮೇಸಲು ಹೋಗಿದ್ದಾರೆ. ಅನ್ನುತ್ತಾರೆ ರಾಷ್ಟ್ರಪತಿ ಎಲ್ಲೋಗಿದ್ದಾರೆ ಅಂದರೆ ಆಸ್ಪತ್ರೆಗೆ ಹೋಗಿದ್ದಾರೆ ಅನ್ನುತ್ತಾರೆ. ಇನ್ನು ಉಳಿದ ಹೆಸರಿನವರು ಸಿಮ್ ಕಾರ್ಡು, ಚಿಪ್, ಜಿಯೊನಿ, ಮಿಸ್ ಕಾಲ್, ರಾಜ್ಯಪಾಲ, ಹೈಕೋರ್ಟ್ ಇತ್ಯಾದಿ ಕೇಳಿದರೆ ನಿಮಗೆ ಗೊಂದಲ ಆಗೋದು ಗ್ಯಾರೆಂಟಿ.

ಅದು ಎಲ್ಲಿ ಅಂತೀರಾ?

ರಾಜಸ್ತಾನದ ಬುಂಡಿ ಜಿಲ್ಲೆಯಿಂದ ಸುಮಾರು 10 ಕಿ. ಮೀ ದೂರದಲ್ಲಿ ರಾಮ್ ನಗರ ಎಂಬ ಗ್ರಾಮಾವಿದೆ. ಇಲ್ಲಿನ ಜನಸಂಖ್ಯೆ ಸುಮಾರು 600ಕ್ಕೂ ಹೆಚ್ಚಿದೆ. ಇಲ್ಲಿ ವಾಸಿಸುತ್ತಿರುವ ಜನರು ಕಂಜಾರ ಸಮುದಾಯದವರು. ದೇಶದ ಉನ್ನತ ಹುದ್ದೆಗಳು, ಖ್ಯಾತನಾಮರು, ಪ್ರಮುಖ ಕಟ್ಟಡಗಳು, ವಸ್ತುಗಳು, ಕಂಪೆನಿಗಳ ಹೆಸರುಗಳನ್ನು ಇಡುತ್ತಾರೆ.

ಈ ಗ್ರಾಮಕ್ಕೆ ಒಂದು ಸಾರಿ ಜಿಲ್ಲಾಧಿಕಾರಿಯವ್ರು ಕೆಲಸದ ಮೇಲೆ ಭೇಟಿ ನೀಡಿರುತ್ತಾರೆ. ಇವರ ವ್ಯಕ್ತಿತ್ವವನ್ನು ನೋಡಿ ಇಲ್ಲಿನ ಮಹಿಳೆಯೊಬ್ಬರು ತನ್ನ ಮೊಮ್ಮನಿಗೆ ಕಲೆಕ್ಟರ್ ಎಂದು ಹೆಸರಿಟ್ಟಿದ್ದಾರೆ. ಆದರೆ ಆ ಮಗು ಶಾಲೆಯ ಕಡೆ ಮುಖ ಮಾಡಿ ನೋಡೇ ಇಲ್ಲ. ಹೀಗೆ ಮತ್ತೊಬ್ಬರು ಪಕ್ಕ ಕಾಂಗ್ರೆಸ್ ಅಭಿಮಾನಿ ಯೊಬ್ಬರು ತಮ್ಮ ಮಕ್ಕಳಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಂಬುದಾಗಿ ಹೆಸರಿಟ್ಟಿದ್ದಾರೆ. ಮತ್ತೊಬ್ಬ ವ್ಯಕ್ತಿಯ ಹೆಸರು ಹೈಕೋರ್ಟ್ ಎಂದು. ಈತನ ಜನ್ಮದ ಸಮಯದಲ್ಲಿ ಅವನ ತಾತನಿಗೆ ಅಪರಾಧ ಪ್ರಕರಣವೊಂದರಲ್ಲಿ ಜಾಮೀನು ಸಿಕ್ಕಿತಂತೆ ಹೀಗಾಗಿ ಹೈಕೋರ್ಟ್ ಎಂಬ ಹೆಸರನ್ನಿಡಲಾಗಿದೆ.

ಹೆಸರು ದಾಖಲಾತಿ ಕಚೇರಿಯಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರೊಬ್ಬರು ಇದರ ಬಗ್ಗೆ ಹೇಳುವ ಮಾತುಗಳು ಹೀಗಿವೆ ನೋಡಿ.

ನಿಮಗೆ ಈ ಒಂದು ವಿಷಯದ ಬಗ್ಗೆ ವಿಚಿತ್ರ ಅನಿಸಿದರೂ ಸತ್ಯ. ಇಲ್ಲಿಯ ಬುಂಡಿ ಜಿಲ್ಲೆಯ ನೈನ್ವಾ ಪ್ರಾಂತ್ಯದ ಮೊಗ್ಗಿಯಾ ಮತ್ತು ಬಂಜಾರಾ ಸಮುದಾಯದವರು ತಮ್ಮ ಮಕ್ಕಳಿಗೆ ಇಡುವ ಹೆಸರು ಹೆಚ್ಚಾಗಿ ಮೊಬೈಲ್ ಕಂಪೆನಿಗಳದ್ದು ಮತ್ತು ಉಪಕರಣಗಳದ್ದು. ನೊಕಿಯಾ, ಸ್ಯಾಮ್ ಸಂಗ್, ಸಿಮ್ ಕಾರ್ಡು,ಚಿಪ್, ಜಿಯೊನಿ ಮೊದಲಾದ ಹೆಸರುಗಳನ್ನು ಬರ್ಗಾನಿ, ಅರ್ನಿಯಾ, ಹನುಮಂತಪುರ, ಸುವಾಲಿಯಾ, ಸೆಸೊಲ ಗ್ರಾಮದಲ್ಲಿ ಕಾಣಬಹುದು ಅದಲ್ಲದೆ ಅರ್ನಿಯಾ ಗ್ರಾಮದ ಮೀನಾ ಸಮುದಾಯದ ಜನರಿಗೆ ಇಡುವ ಹೆಸರು ಮತ್ತಷ್ಟು ವಿಚಿತ್ರವಗಾದೆ. ತಿಂಡಿ ತಿನಿಸುಗಳ ಹೆಸರುಗಳು, ನಮ್ಕೀನ್, ಪೊಟೊಬಾಯ್, ಜೆಲೇಬಿ, ಮಿತೈ, ಫಲ್ಟು ಇತ್ಯಾದಿ. ನಾವು ಆರಂಭದಲ್ಲಿ ಹೆಸರು ದಾಖಲಾತಿ ಮಾಡಿಕೊಳ್ಳುವಾಗ ಆಶ್ಚರ್ಯಗೊಂಡೆವು.ಆದರೆ ಈಗ ಅಂತಹ ಹೆಸರುಗಳನ್ನು ಬರೆಯುವುದು ರೂಢಿಯಾಗಿಬಿಟ್ಟಿದೆ ಎನ್ನುತ್ತಾರೆ.

LEAVE A REPLY

Please enter your comment!
Please enter your name here