ಈಶಾನ್ಯ ರಾಜ್ಯದ ಮೂರೂ ಕಡೆ ಕಾಂಗ್ರೆಸ್ ಧೂಳಿಪಟವಾಗುವುದು ಬಹುತೇಕ ಖಚಿತವಾಗಿದೆ, ಈ ಮೊಲ್ಲ್ಯಾಕ ಜಿದ್ದಾಜಿದ್ದಿಯ ಕ್ಷೇತ್ರಗಳಲ್ಲಿ ಬಿ ಜೆ ಪಿ ಯ NDA  ಗೆ ಸ್ಪಷ್ಟ ಗೆಲುವು ಸಿಕ್ಕಂತಾಗಿದೆ.

ತ್ರಿಪುರಾದಲ್ಲಿ ಕಮ್ಯುನಿಸ್ಟ್ ಧೂಳಿಪಟ..

ತ್ರಿಪುರದಲ್ಲಿ ಸುಮಾರು ನಾಲ್ಕು ದಶಕಗಳಿಂದ ಸಿಪಿಎಂ ಅಧಿಕಾರದಲ್ಲಿತ್ತು.  ಇಲ್ಲಿ ಪಕ್ಷ ನಿರಂತರವಾಗಿ ಗೆಲ್ಲುತ್ತಿರುವುದು ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್‌ ಅವರ ವರ್ಚಸ್ಸಿನಿಂದಾಗಿಯೇ ಹೊರತು ಪಕ್ಷದ ಸ್ವಂತ ಸಾಮರ್ಥ್ಯದಿಂದ ಅಲ್ಲ. ಸತತ 20 ವರ್ಷಕ್ಕೂ ಅಧಿಕವಾಗಿ ಮಾಣಿಕ್ ಸರ್ಕಾರ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದರು. ವ್ಯಾಪಕ ಭ್ರಷ್ಟಾಚಾರದ ಆರೋಪದಿಂದ ಮಾಣಿಕ್ ಸರ್ಕಾರ್ ವಿರುದ್ಧ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿತ್ತು. ಇದೀಗ ಮಾಣಿಕ್ ನೇತೃತ್ವದ ಸರ್ಕಾರ ಪತನವಾಗಿದ್ದು, ನಿರೀಕ್ಷೆಯಂತೆಯೇ ಬಿಜೆಪಿ ತ್ರಿಪುರಾದಲ್ಲಿ ಜಯಭೇರಿ ಬಾರಿಸಿದೆ. ಸಿಪಿಎಂ ಕೈಯಲ್ಲಿರುವ ಎರಡು ರಾಜ್ಯಗಳ ಪೈಕಿ ಒಂದು ಇದು.

 

2013ರ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಗೆಲ್ಲದ ಬಿಜೆಪಿ 59 ಕ್ಷೇತ್ರಗಳ ಪೈಕಿ 39 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸಿಪಿಎಂ 20 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಕಾಂಗ್ರೆಸ್ ಯಾವೊಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿಲ್ಲ

ವಿಶೇಷ ಏನೆಂದರೆ 2013ರ ಚುನಾವಣೆಯಲ್ಲಿ ಒಟ್ಟು 60 ಸ್ಥಾನಗಳಲ್ಲಿ ಸಿಪಿಎಂ 49, ಕಾಂಗ್ರೆಸ್ 10, ಸಿಪಿಐ 1 ಸ್ಥಾನವನ್ನು ಗೆದ್ದುಕೊಂಡಿತ್ತು.

LEAVE A REPLY

Please enter your comment!
Please enter your name here