ಡೈರೆಕ್ಟ್ ಟು ಹೋಮ್‌ ರಿಲಯನ್ಸ್‌ ಬಿಗ್‌ ಟಿವಿ ಪ್ರೀ ಬುಕ್ಕಿಂಗ್‌ ಆರಂಭಗೊಂಡಿದೆ. ಇದರೊಂದಿಗೆ 500ಕ್ಕೂ ಹೆಚ್ಚು  ಫ್ರೀ-ಟು-ಏರ್‌ ಚ್ಯಾನಲ್‌ಗ‌ಳನ್ನು ಐದು ವರ್ಷಗಳ ಕಾಲ ಮತ್ತು ಪೇ ಚ್ಯಾನಲ್‌ಗ‌ಳನ್ನು ಒಂದು ವರ್ಷ ಕಾಲ ಆನಂದಿಸುವ ಕೊಡುಗೆಯನ್ನು ಅದು ನೀಡಿದೆ.

ರಿಲಯನ್ಸ್ ಟಿವಿಯು ಶುಲ್ಕ ರಹಿತವಾದ 500 ವಾಹಿನಿಗಳನ್ನು 5 ವರ್ಷಗಳವರೆಗೆ ಹಾಗೂ ಶುಲ್ಕ ಸಹಿತ ವಾಹಿನಿಗಳನ್ನು ಒಂದು ವರ್ಷಗಳ ಕಾಲದವರೆಗೂ ದೇಶಾದ್ಯಂತ ಗ್ರಾಹಕರಿಗೆ ಉಚಿತವಾಗಿ ನೀಡುವುದಾಗಿ ತಿಳಿಸಿದ್ದಾರೆ. ಮನೋರಂಜನೆ ಕ್ಷೇತ್ರದಲ್ಲಿ ತನ್ನ HD HEVC ಸೆಟ್‌ ಟಾಪ್‌ ಬಾಕ್ಸನ್ನು ಸಂಪೂರ್ಣ ಉಚಿತವಾಗಿ ನೀಡುವ ಮೂಲಕ ಡಿಜಿಟಲ್ ಕ್ರಾಂತಿಯನ್ನು ಪರಿಣಾಮಕಾರಿಯಾಗಿ ಹೊರತರಲು ರಿಲಯನ್ಸ್ ಬಿಗ್ ಟಿವಿಯು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ.

ಬಳಕೆದಾರರು  ಉಚಿತದ ನಂತರದ ದಿನಗಳಲ್ಲಿ ಸೇವೆಯನ್ನು ಪಡೆಯಲು ಮಾಸಿಕ 300 ರೂ.ಗಳನ್ನು ಎರಡನೇಯ ವರ್ಷದ ಶುರುವಿನಲ್ಲಿ ಸಲ್ಲಿಸಿ ಎಲ್ಲ ಪಾವತಿ ವಾಹಿನಿಗಳನ್ನು ವೀಕ್ಷಿಸಬಹುದು, ಹಾಗೆಯೇ ಮುಂದಿನ ಎರಡು ವರ್ಷಗಳ ಕಾಲ ರಿಲಯನ್ಸ್ ಬಿಗ್‌ ಟಿವಿಯ ಬಳಕೆದಾರರಿಗೆ 1999. ರೂ.ಗಳನ್ನು ಲಾಯಲ್ಟಿ ರೂಪದಲ್ಲಿ ಮರುಪಾವತಿ ನೀಡಲಾಗುತ್ತದೆ. (ಈ ಮೊತ್ತವನ್ನು ಚಂದಾದಾರರಿಂದ ಬುಕಿಂಗ್‌ ಮಾಡಬೇಕಾದರೆ ಹಾಗು ಸೆಟ್ ಟಾಪ್ ಬಾಕ್ಸ್‌ ಅನ್ನು ಪಡೆಯಬೇಕಾದರೆ ಸ್ವೀಕರಿಸಲಾಗಿರುತ್ತದೆ).

ಮಾರ್ಚ್ 1, 2018ರಂದು 10 ಗಂಟೆಯಿಂದ ಆರಂಭವಾಗುವ ಪ್ರೀ ಬುಕ್ಕಿಂಗ್ ಸೀಮಿತ ಅವಧಿಯವರೆಗೆ ಮಾತ್ರ ಇರುತ್ತದೆ ಎಂದು ಬಿಗ್ ಟಿವಿ ತಿಳಿಸಿದೆ. ವೆಬ್ ಸೈಟ್‌ಗೆ (www.reliancedigitaltv.com) ಲಾಗಿ ಇನ್ ಆಗಿ ಬುಕಿಂಗ್‌ ಮೊತ್ತವಾದ 499 ರೂ. ಸಲ್ಲಿಸಿ ಬುಕ್ಕಿಂಗ್‌ ಮಾಡಬಹುದು.

LEAVE A REPLY

Please enter your comment!
Please enter your name here