ಬಿಸಿ ಬಿಸಿಯಾದ ಪದಾರ್ತಗಳನ್ನ ತಿನ್ನಲು ನಮಗೆಲ್ಲರಿಗೂ ಬಹಳಾನೇ ಇಷ್ಟ. ಬಿಸಿಯಾದ ಆಹಾರ ಹೆಚ್ಚು ರುಚಿಯನ್ನ ನೀಡುತ್ತದೆ. ಆದರೆ ಬಿಸಿಯಾಗಿ ತಿಂದರೆ ಬಾಯಿ ಸುಡುತ್ತದೆ. ಹೆಚ್ಚಾಗಿ ನಾವು ಟೀ ಅಥವಾ ಕಾಫೀ ಕುಡಿಯುವಾಗ ಬಾಯಿಯನ್ನ ಸುಟ್ಟುಕೊಳ್ಳುವುದು ಸಹಜ. ಇದಕ್ಕೆ ಏನು ಮಾಡಬೇಕು ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಬಾಯಿ ಸುಟ್ಟರೆ ಉರಿಯನ್ನ ಕಡಿಮೆ ಮಾಡಲು ತಕ್ಷಣ ಏನು ಮಾಡಬೇಕು ಎಂಬುದು ಇಲ್ಲಿದೆ ನೋಡಿ.

* ಜೇನುತುಪ್ಪ

ಯಾವುದೇ ಸುಟ್ಟ ಗಾಯಕ್ಕೂ ಜೇನು ತುಪ್ಪ ಒಳ್ಳೆಯ ಮದ್ದು. ಹಾಗೆಯೇ ಬಾಯಿ ಸುಟ್ಟಿದ್ದರೂ ಜೇನು ತುಪ್ಪ ಸೇವಿಸಿ.

* ಅಲೋವೇರಾ

ಅಲೋವೇರಾ ಬಾಯಿ ಉರಿ ಮತ್ತು ಸಂವೇದನೆ ಕಳೆದುಕೊಂಡಿದ್ದರೂ ಅದನ್ನು ಮರಳಿ ಪಡೆಯುವುದಕ್ಕೆ ಸಹಾಯ ಮಾಡುತ್ತದೆ.

* ಸಕ್ಕರೆ

ಬಾಯಿ ಸುಟ್ಟುಕೊಂಡರೆ ಒಂಚೂರು ಸಕ್ಕರೆ ಅಥವಾ ಕಲ್ಲು ಸಕ್ಕರೆ ಬಾಯಿಗೆ ಹಾಕಿ ಸ್ವಲ್ಪ ಹೊತ್ತು ಇಟ್ಟುಕೊಳ್ಳಿ.

* ಪುದೀನಾ
ಪುದೀನಾ ಎಲೆ ಒಗರು ಒಗರಾಗಿರುತ್ತದೆ. ಆದರೂ ಬಾಯಿ ಸುಟ್ಟುಕೊಂಡರೆ ಪುದೀನಾ ಎಲೆಗಳನ್ನು ಜಗಿಯಿರಿ.

* ಮಜ್ಜಿಗೆ

ಬಾಯಿ ಸುಟ್ಟುಕೊಂಡ ತಕ್ಷಣ ಮಜ್ಜಿಗೆ ಕುಡಿಯಿರಿ.

LEAVE A REPLY

Please enter your comment!
Please enter your name here