ಹೌದು ಕೆಲವೊಂದು ಸಂಗತಿಗಳು ವಿಚಿತ್ರ ಅನಿಸಿದರೂ ಸತ್ಯಕ್ಕೆ ಹತ್ತಿರವಾಗಿರುತ್ತವೆ. ಆದರೆ ಅದೆಲ್ಲದಕ್ಕೂ ಸರಿಯಾದ ಮಾಹಿತಿ ಸಿಕ್ಕ ಮೇಲೆನೇ ಸತ್ಯ ಏನು ಅನ್ನೋದು ಗೊತ್ತಾಗೋದು. ಈ ಸುದ್ದಿಯು ಸಾಮಾಜಿಕ ಜಾಲ ತಾಣಗಳಲ್ಲಿ ಎಲ್ಲೆಡೆ ವೈರಲ್ ಆಗುತ್ತಿದೆ. ನೈಜೀರಿಯಾದ ಈ ವ್ಯಕ್ತಿಗೆ 13 ಜನ ಹೆಂಡತಿಯರಂತೆ ಹಾಗು ಅವರೆಲ್ಲರೂ ಒಮ್ಮೆಲೇ ಗರ್ಭಿಣಿಯರಾಗಿದ್ದರೆ ಅನ್ನೋ ಸುದ್ದಿ ಎಲ್ಲೆಡೆ ಹರಡುತ್ತಿದೆ.

ಅದು ಎಷ್ಟರ ಮಟ್ಟಿಗೆ ನಿಜಾನೋ ಸುಳ್ಳೋ ಗೊತ್ತಿಲ್ಲ ಆದರೆ ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿದೆ. ಇವರು ಒಮ್ಮೆಲೇ ಗರ್ಭಿಣಿಯರಾಗುವುದಕ್ಕೆ ಸಾಧ್ಯನೇ ಇಲ್ಲ ಅನ್ನೋ ಮಾತು ಕೆಲವರದ್ದು ಆದರೆ ಅವರು ಎರಡು ಮೂರೂ ವಾರಗಳ ಹೆಚ್ಚು ಕಡಿಮೆ ಅವಧಿಯಲ್ಲಿ ಇದ್ದಾರೆ ಅನ್ನೋದು ತಿಳಿಯಲಾಗುತ್ತದೆ.

ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ 2 -3 ಚಿತ್ರ ಪಟಗಳು ವೈರಲ್ ಆಗುತ್ತಿವೆ ಒಂದು ಚಿತ್ರ ಪಾಠದಲ್ಲಿ ಆ ವ್ಯಕ್ತಿ ಮದ್ಯದಲ್ಲಿ ನಿಂತು ಸುತ್ತಲೂ ತನ್ನ ಹೆಂಡತಿಯರು ಇರುವುದು. ಮತ್ತು ಉಳಿದವು ಆ ಮಹಿಳೆಯರ ಹೊಟ್ಟೆಯ ಮೇಲೆ ಕಾರ್ಟ್ನ್ ಚಿತ್ರ ಪಟಗಳು.

ಈ ಹಿಂದೆ ವಿಶ್ವದಾಖಲೆ ಮಾಡಿದ ಮಿಜೊರಾಮ್ 39 ಪತ್ನಿಯರನ್ನು ಹೊಂದಿರುವ ವಿಶ್ವದಲ್ಲೇ ಅತಿದೊಡ್ಡ ಸಂಸಾರ ಎಂದು ಹೇಳಗಾಗುತ್ತಿತ್ತು ಆದರೆ ಇದೀಗ ಈ ವ್ಯಕ್ತಿ 13 ಪತ್ನಿಯರೊಂದಿಗೆ ಎರಡನೇ ಸ್ಥಾನದಲ್ಲಿ ನಿಲ್ಲುತ್ತಾನೆ ಎನ್ನಲಾಗುತ್ತಿದೆ. ಅದೇನೇ ಇರಲಿ ಒಂದು ಹೆಂಡತಿಯನ್ನು ಕಟ್ಟಿ ಕೊಂಡು ಬಾಳ್ವೆ ಮಾಡೋದೇ ಕಷ್ಟ ಅನ್ನೋ ಜನರ ಮುಂದೆ ಈತ 13 ಜನ ಹೆಂಡತಿಯರೊಂದಿಗೆ ಸುಖವಾಗಿ ಸಂಸಾರ ಮಾಡುತ್ತಿದ್ದು ಒಮ್ಮೆಲೇ ಎಲ್ಲರು ಗರ್ಭ ಧರಿಸಿರುವುದು ಎಷ್ಟರ ಮಟ್ಟಿಗೆ ನಿಜಾನೋ ಸುಳ್ಳು ಅನ್ನೋದು ತಿಳಿಯ ಬೇಕಾಗಿದೆ.

LEAVE A REPLY

Please enter your comment!
Please enter your name here