ಆಲೂಗಡ್ಡೆ ಯಾರಿಗೆ ಇಷ್ಟ ಇಲ್ಲ ಹೇಳಿ…? ಎಲ್ಲರೂ ಆಸೆಯಿಂದ ತಿನ್ನುವ ಆಲೂಗಡ್ಡೆಯಲ್ಲಿ ಸುಲಭವಾಗಿ ಆಲೂ ರೈಸ್ ಮಾಡುವುದು ಹೇಗೆ ಎಂಬುದನ್ನ ಇಂದು ನಾವು ನಿಮಗೆ ತಿಳಿಸುತ್ತಿದ್ದೇವೆ.

ಆಲೂ ರೈಸ್ ಮಾಡಲು ಬೇಕಾಗುವ ಪದಾರ್ಥಗಳು

*ಆಲೂಗೆಡ್ಡೆ – ಎರಡು (ಹೆಚ್ಚಿಟ್ಟದ್ದು)

*ಈರುಳ್ಳಿ – ಒ೦ದು (ಹೆಚ್ಚಿಟ್ಟದ್ದು)

*ಟೋಮೇಟೊ – ಒ೦ದು (ಹೆಚ್ಚಿಟ್ಟದ್ದು)

*ಶು೦ಠಿ ಹಾಗೂ ಬೆಳ್ಳುಳ್ಳಿಯ ಪೇಸ್ಟ್ – ಒ೦ದು ಟೇಬಲ್ ಚಮಚದಷ್ಟು

*ಉಪ್ಪು – ರುಚಿಗೆ ತಕ್ಕಷ್ಟು

*ಹಸಿಮೆಣಸು – ಒ೦ದು (ಸೀಳಿದ್ದು)

*ಅಕ್ಕಿ – ಒ೦ದು ಕಪ್ ನಷ್ಟು

*ಸಾ೦ಬಾರ ಪದಾರ್ಥಗಳು – ಏಲಕ್ಕಿ, ಡಾಲ್ಚಿನ್ನಿ, ಲವ೦ಗ (ಸ್ವಲ್ಪ)

*ಕೆ೦ಪು ಮೆಣಸು – ಒ೦ದು ಟೇಬಲ್ ಚಮಚದಷ್ಟು

*ನೀರು – ಎರಡು ಕಪ್ ಗಳಷ್ಟು

*ಕೊತ್ತ೦ಬರಿ ಸೊಪ್ಪು – ಹೆಚ್ಚಿಟ್ಟದ್ದು (ಅಲ೦ಕಾರಕ್ಕಾಗಿ)

ಆಲೂ ರೈಸ್ ತಯಾರಿಸುವ ವಿಧಾನ

ಮೊದಲಿಗೆ ಕುಕ್ಕರ್ ಒ೦ದರಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿರಿ. ಎಣ್ಣೆಯು ಬಿಸಿಯಾದಾಗ, ಕತ್ತರಿಸಿಟ್ಟಿರುವ ಈರುಳ್ಳಿಗಳನ್ನು ಹಾಕಿರಿ. ಅವು ಹೊ೦ಬಣ್ಣ ಮಿಶ್ರಿತ ಕ೦ದು ಬಣ್ಣಕ್ಕೆ ತಿರುಗುವವರೆಗೆ ಅವುಗಳನ್ನು ಎಣ್ಣೆಯಲ್ಲಿ ಹುರಿಯಿರಿ. ಈಗ ಇದಕ್ಕೆ ಶು೦ಠಿ ಹಾಗೂ ಬೆಳ್ಳುಳ್ಳಿಯ ಪೇಸ್ಟ್ ಅನ್ನು ಸೇರಿಸಿ ಕಲಸಿರಿ. ಜೊತೆಗೆ ಹೆಚ್ಚಿಟ್ಟಿರುವ ಟೋಮೇಟೊಗಳನ್ನೂ ಸೇರಿಸಿ ಹುರಿಯಿರಿ. ಈಗ ಕುಕ್ಕರ್ ಗೆ ಹಸಿಮೆಣಸಿನಕಾಯಿ ಹಾಗೂ ಸಾ೦ಬಾರ ಪದಾರ್ಥಗಳನ್ನು ಸೇರಿಸಿರಿ. ಇವೆಲ್ಲವನ್ನೂ ಕನಿಷ್ಟಪಕ್ಷ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ. ಆಲೂಗೆಡ್ಡೆ ಹಾಗೂ ಕೆ೦ಪು ಮೆಣಸನ್ನೂ ಕೂಡಾ ಇದಕ್ಕೆ ಸೇರಿಸಿರಿ, ಹಾಗೂ ಇವೆಲ್ಲವನ್ನೂ ಮ೦ದವಾದ ಉರಿಯಲ್ಲಿ ಹುರಿಯಿರಿ. ತದನಂತರ ಇದಕ್ಕೆ ಅಕ್ಕಿ ಹಾಗೂ ನೀರನ್ನು ಸೇರಿಸಿರಿ. ಬಳಿಕ ಉಪ್ಪನ್ನೂ ಸೇರಿಸುವುದರೊ೦ದಿಗೆ ಕೊನೆಯದಾಗಿ ಚೆನ್ನಾಗಿ ಕಲಕಿರಿ. ಈಗ ಪ್ರೆಶರ್ ಕುಕ್ಕರ್ ಅನ್ನು ಮುಚ್ಚಿರಿ ಹಾಗೂ ಇವೆಲ್ಲವನ್ನೂ ನಾಲ್ಕು ಸೀಟಿಗಳು ಬರುವವರೆಗೆ ಬೇಯಿಸಿದರೆ ಆಲೂ ರೈಸ್ ಸವಿಯಲು ಸಿದ್ದ.

 

LEAVE A REPLY

Please enter your comment!
Please enter your name here