ದುಬೈ ಜನರು ಎಂದರೆ ಅವರು ಶ್ರೀಮಂತರು ಎಂದರೆ ತಪ್ಪಿಲ್ಲ. ಸಿನಿಮಾಗಳಲ್ಲಿ ತೋರಿಸುವ ಅತೀ ಶ್ರೀಮಂತಿಕೆಯ ಜೀವನ ದುಬೈ ಜನರಿಗೆ ಸಾಮಾನ್ಯ ಜೀವನದ ಹಾಗೆ. ದುಬೈ ಜನರು ಅತೀ ಶ್ರೀಮಂತರು ಎಂಬುದಕ್ಕೆ ಅವರು ಬಳಸುವ ಪ್ರತಿ ದಿನದ ವಸ್ತುಗಳನ್ನ ನೋಡಿದರೆ ಸಾಕು. ಇಲ್ಲಿನ ಜನರು ಯಲ್ಲಾದರಲ್ಲೂ ಶ್ರೀಮಂತಿಕೆಯನ್ನ ಮೆರೆಯುತ್ತಾರೆ, ತಿನ್ನುವ ಪದಾರ್ಥಗಳಿಂದ ಹಿಡಿದು ಅವರು ಬಳಸುವ ವಾಹನಗಳವರೆಗೆಎಲ್ಲವು ಬಂಗಾರದ್ದೇ. ಹಾಗಾದರೆ ದುಬೈ ಜನರ ಶ್ರೀಮಂತಿಕೆಯನ್ನೊಮ್ಮೆ ನೀವು ನೋಡಿ.

● ದುಬೈ ನಲ್ಲಿಯ ಬುರ್ಜ್ ಖಲಿಫಾ ಹೆಸರಿನ ವಾಸ್ತು ನಿಮಗೆ ಗೊತ್ತಿರಬೇಕು. ಈ ವಾಸ್ತುವನ್ನ ಮೇಲಿಂದ ಕೆಳಗಿನ ದೃಶ್ಯ ನೋಡಿದರೆ ನಾವು ಬೇರೆಯೇ ಜಗತ್ತಿನಲ್ಲಿ ಸಂಚರಿಸುತ್ತಿರುವ ಅನುಭವವಾಗದೆ ಇರಲಾರದು.

● ಇಲ್ಲಿಯ ಜನ ರಾಜನ ಹಾಗೆ ಜೀವನ ಮಾಡುತ್ತಾರೆ. ಇವರು ಉಪಯೋಗಿಸುವ ದೈನಂದಿನ ಜೀವನದಲ್ಲಿಯ ವಾಹನಗಳು ಸಹಿತ ಕಿಂಗ್ ಸೈಜಿನದಿರುತ್ತವೆ.

● ನಮ್ಮ ಜನ ಹವ್ಯಾಸಕ್ಕಾಗಿ ನಾಯಿ, ಬೆಕ್ಕುಗಳನ್ನು ಸಾಕುವರು. ಆದರೆ ಈ ಅರಬಿ ಜನರು ತಮ್ಮ ಹವ್ಯಾಸಕ್ಕಾಗಿ ಹುಲಿ, ಚಿರತೆ, ಸಿಂಹ ಗಳನ್ನು ಸಾಕುತ್ತಾರೆ.

● ಇನ್ನೊಂದು ಹವ್ಯಾಸ ವೆಂದರೆ ಇಲ್ಲಿ ಒಂಟೆಯ ರೇಸ್ ನಡೆಸಲಾಗುತ್ತದೆ. ಈ ಒಂಟೆಗಳನ್ನು ಓಡಿಸುವವರು ಮನುಷ್ಯರಲ್ಲ, ರೋಬೋಟ್ ಇರುತ್ತವೆ. ಇದರಿಂದ ಈ ಪಂದ್ಯಗಳು ಮತ್ತಷ್ಟು ರೋಚಕವಾಗುತ್ತವೆ.

● ನಮ್ಮ ಕರ್ನಾಟಕ ಅಥವಾ ಭಾರತೀಯ ಪೋಲಿಸ್ ರಿಗೆ ನಮ್ಮ ಸೇವೆಯ ಸಲುವಾಗಿ ದೊರೆಯುವ ಗಾಡಿಗಳು ನಮಗೆಲ್ಲರಿಗೂ ಗೊತ್ತೇ ಇದೆ. ಆದರೆ ದುಬೈ ಪೊಲೀಸರ ಕಡೆಗೆ ಇರುವ ಸರ್ಕಾರಿ ಗಾಡಿಗಳನ್ನು ನೋಡಿ ಬೆಚ್ಚಿ ಬೀಳದೆ ಇರಲಾರೆವು. ಅಲ್ಲಿಯ ಪೋಲಿಸರಿಗೆ Bentleys, Ferraries, Lamborghinis, ಈ ಗಾಡಿಗಳು ದೊರೆಯುತ್ತವೆ.

● ನಾವು ಚಾಕ್ಲೆಟ್ ವೆಂಡಿಂಗ್, ಟಿಕೆಟ್ ವೆಂಡಿಂಗ್, ಮಷಿನಗಳನ್ನು ನೋಡಿದ್ದೇವೆ. ದುಬೈನಲ್ಲಿ ನಿಮಗೆ ಬಂಗಾರದ ಬಿಸ್ಕತ್ ಕೊಡುವ ಗೋಲ್ಡ್ ವೆಂಡಿಂಗ್ ಮಷಿನ್ ಲಭ್ಯವಿದೆ. ದುಬೈ ನಲ್ಲಿ ಬಂಗಾರದ ಮೇಲೆ 0% ಕರವಿದೆ.

● ಇಲ್ಲಿಯ ಜನರಿಗೆ ಬಂಗಾರ ತುಂಬಾ ಪ್ರಿಯವಿರುವದರಿಂದ ಅವರು ತಮ್ಮ ಕಾರುಗಳನ್ನೂ ಸಹಿತ ಬಂಗಾರದಿಂದ ಲೇಪಿಸಿ ಕೊಂಡಿದ್ದಾರೆ. ಕಾರಿನ ಮೇಲ್ಮೈ(ಬಾಡಿ) ಪೂರ್ತಿ ಬಂಗಾರದ ಲೇಪನದಿಂದಲೇ ಕೂಡಿದ ವಾಹನಗಳನ್ನು ಉಪಯೋಗಿಸುವರು.

● ನಿಮ್ಮ ಹತ್ತಿರ ಒಂದು ವೇಳೆ ಸಾಕಷ್ಟು ಹಣವಿದ್ದರೆ ನಿಮಗೆ ಇಲ್ಲಿ ಬಂಗಾರ ತಿನ್ನಲಿಕ್ಕೂ ಸಿಗುತ್ತದೆ. ಇಲ್ಲಿಯ ಹೋಟೆಲುಗಳಲ್ಲಿ ಬಂಗಾರ ಮಿಶ್ರಿತ ಪ್ರಸಿದ್ಧ ಡಿಶ್ ಗಳು ಹೆಸರುವಾಸಿಯಾಗಿವೆ. ಈ ಡಿಶ್ ಗಳ ಬೆಲೆ ಕಡಿಮೆಯೆಂದರೆ 1000 ಡಾಲರ್ ಗಳಿಂದ ಪ್ರಾರಂಭವಾಗುತ್ತದೆ.

● ಮರಳಿನಿಂದಲೇ ತುಂಬಿರತಕ್ಕಂತಹ ಈ ದುಬೈ ನಲ್ಲಿ ನಿಮಗೇ ಹಿಮಾಚ್ಛಾದಿತ ಪರ್ವತ, ಹಿಮಪರ್ವತ ಇವು ಸಹಜವಾಗಿ ಉಪಲಬ್ಧವಿವೆ.

ದುಬೈ ನಲ್ಲಿ ಈ ಮೇಲೆ ಹೇಳಿರುದನ್ನ ಬಿಟ್ಟು ಇನ್ನು ಅದೆಷ್ಟೋ ಅವಿಶ್ವಸನೀಯ ವಸ್ತುಗಳು, ಸ್ಥಳಗಳು ಕಂಡು ಬರುತ್ತವೆ. ಇಂತಹ ವಿಚಿತ್ರ ಸ್ಥಳಗಳನ್ನು ಹಾಗೂ ದುಬಾರಿ ಜೀವನ ಶೈಲಿಯನ್ನು ಹೊಂದಿದ ದುಬೈ ಯನ್ನು ಜೀವನದಲ್ಲಿ ಒಮ್ಮೆ ಯಾದರೂ ನೋಡಲೇಬೇಕು ಎಂದೆನಿಸದೆ ಇರಲಾರದು.

 

LEAVE A REPLY

Please enter your comment!
Please enter your name here