ಸೊಳ್ಳೆ, ಈ ಹೆಸರು ಕೇಳಿದ ಕೂಡಲೇ ಕಾಯಿಲೆಗಳ ದಂಡೇ ಕಣ್ಣ ಮುಂದೆ ಹಾದು ಹೋಗುತ್ತವೆ. ವೈದ್ಯರು ಹೇಳುವ ಪ್ರಕಾರ ಸೊಳ್ಳೆಗಳಿಂದಲೇ ಹಲವಾರು ಕಾಯಿಲೆಗಳು ಬರುವುದು ಹಾಗೂ ಹೆಚ್ಚಿನ ಜನರಿಗೆ ಹರಡುವುದು. ಸೊಳ್ಳೆಗಳನ್ನ ನಾವು ಎಷ್ಟೇ ದೂರವಿಟ್ಟರು ಅದರಿಂದ ಬರುವ ಕಾಯಿಲೆಗಳನ್ನ ದೂರವಿಡಲು ಆಗುವುದಿಲ್ಲ. ಸೊಳ್ಳೆಗಳು ಮನೆಯ ಸುತ್ತ ಮುತ್ತ ಬರದಂತೆ ಮನೆಯ ವಾತಾವರಣವನ್ನ ಸ್ವಚ್ಛವಾಗಿಟ್ಟರು ಸೊಳ್ಳೆಗಳ ಕಾಟ ತಪ್ಪಿದ್ದಲ, ಇನ್ನು ನಮ್ಮ ವಿದ್ಯಮಾನಗಳು ಬದಲಾದಂತೆ ಸೊಳ್ಳೆಗಳನ್ನ ಹೊರ ಹಾಕಲು ಸೊಳ್ಳೆ ಬತ್ತಿ, ಗುಡ್ ನೈಟ್ ಲಿಕ್ವಿಡ್, ಇವುಗಳಲ್ಲದೆ ಸೊಳ್ಳೆಗಳು ಕಚದಂತೆ ಕ್ರೀಮ್ಗಳು ಸಹ ಬಂದಿವೆ. ಇವುಗಳನ್ನ ಮೀರಿಯೂ ಸೊಳ್ಳೆಗಳು ತೊಂದರೆ ಮಾಡುತ್ತವೆ. ಇದುವರೆಗೂ ನಾವು ಬದುಕಿರುವ ಸೊಳ್ಳೆಗಳಿಂದ ಮಾತ್ರ ನಮಗೆ ತೊಂದರೆಗಳು, ಕಾಯಿಲೆಗಳು ಬರುತ್ತವೆ ಎಂದು ಭಾವಿಸಿದ್ದೇವೆ, ಆದರೆ ಅದು ತಪ್ಪು ಸತ್ತ ಸೊಳ್ಳೆಗಳಿಂದಲೂ ಸಹ ಕಾಯಿಲೆಗಳು ಬರುತ್ತವೆ ಎಂದು ಸಾಬೀತಾಗಿದೆ.

ಇಲ್ಲಿಯವರೆಗೆ ಬರೀ ಜೀವಂತ ಸೊಳ್ಳೆಯಿಂದ ಹರಡುವ ಹಾಗೂ ಸಾವಿನ ಸಮೀಪ ತೆಗೆದುಕೊಂಡು ಹೋಗುವ ಕಾಯಿಲೆಗಳ ಬಗ್ಗೆನೇ ಕೇಳಿದ್ದೆವು ಆದರೆ ಈಗ ಸತ್ತ ಸೂಳ್ಳೆಯಿಂದಲೂ ಸಹ ಜೀವಕ್ಕೆ ಅಪಾಯವಿದೆ ಎಂಬುದು ಖಚಿತವಾಗಿದೆ.

ದೆಹಲಿಯ ವಿಶ್ವ ವಿದ್ಯಾಲಯದ ವಲ್ಲಭಬಾಯಿ ಪಟೇಲ್ ಹೃದಯ ಚಿಕಿತ್ಸಾ ಘಟಕದಲ್ಲಿ ನಡೆದ ಅಧ್ಯಯನ ಒಂದರಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಈ ಅಧ್ಯಯನದ ನೇತೃತ್ವ ವಹಿಸಿದ ಡಾ ಕುಮಾರ್ ಅವರು ಸೊಳ್ಳೆಯ ಅವಶೇಷಗಳು ಹಗುರವಾದ್ದರಿಂದ ಗಾಳಿಯ ಮೂಲಕ ಸೇರಿ ನಾಸಿಕದ ಮಾರ್ಗದಿಂದ ನಮ್ಮ ದೇಹದಲ್ಲಿ ಸೇರಿ ಅಸ್ತಮಾ ಮತ್ತು ಅಲರ್ಜಿಯಂತಹ ಸಮಸ್ಯೆಗಳು ಹೆಚ್ಚು ಉಲ್ಭಣಗೊಳಿಸಲು ಸಹಕಾರ ಮಾಡುತ್ತವೆ. ಆದ್ದರಿಂದ ಆದಷ್ಟು ಮನೆಯಲ್ಲಿ ಸೊಳ್ಳೆಗಳು ವಾಸಮಾಡದ ಹಾಗೆ ಜಾಗರೂಕರಾಗಿರಬೇಕು. ಮಲಗುವಾಗ ಸೊಳ್ಳೆಪರದೆಯ ಉಪಯೋಗ ಮಾಡುವದು ನಮ್ಮ ಆರೋಗ್ಯದ ದೃಷ್ಟಿ ಇಂದ ಒಳ್ಳೆಯದು ಎಂದು ಹೇಳಿದ್ದಾರೆ.

 

LEAVE A REPLY

Please enter your comment!
Please enter your name here