ಮಸಾಲೆಗಳ ರಾಣಿಯಂದೇ ಖ್ಯಾತಿ ಪಡೆದಿರುವ ಕಾಳು (ಕರಿ) ಮೆಣಸು. ಅಡುಗೆ ಮನೆಯಲ್ಲಿ ಇದರದ್ದೇ ಕಾರು ಬಾರು, ಸಾಮಾನ್ಯವಾಗಿ ಇದನ್ನ ಮಸಾಲೆ ಪದಾರ್ಥವಾಗಿ ಬಳಸುತ್ತಾರೆ, ಇದು ಅಡುಗೆಯ ರುಚಿಯನ್ನ ಹೆಚ್ಚಿಸುತ್ತದೆ. ಇದು ಬಹಳ ಕಾರವಾಗಿದ್ದು ಇದರ ಸೇವನೆ ಆರೋಗ್ಯಕ್ಕೆ ಬಹಳ ಉಪಯುಕ್ತಕಾರಿ. ಕಾಳು ಮೆಣಸು ನಮ್ಮ ದೇಹದ ಅನೇಕ ರೋಗಗಳನ್ನ ಕಡಿಮೆ ಮಾಡುತ್ತದೆ.

* ಹೊಟ್ಟೆ ಸಮಸ್ಯೆ

Young woman holding her stomach in pain lying on a bed.

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿರುವವರು ಒಂದು ಗ್ರಾಂ ಕಾಳು ಮೆಣಸಿನ ಪುಡಿಗೆ ನಿಂಬೆ ರಸ ಹಾಗೂ ಶುಂಠಿ ರಸ ಬೆರೆಸಿ ಕುಡಿದ್ರೆ ಒಳ್ಳೆಯದು.

* ಎಸಿಡಿಟಿ

ಹೊಟ್ಟೆ ಉಬ್ಬರ, ಹುಳಿ ತೇಗು, ಗಂಟಲು ಸೋಂಕಿದ್ದಲ್ಲಿ ಕಾಳು ಮೆಣಸಿನ ಪುಡಿಗೆ ನಿಂಬೆ ರಸ, 1/2 ಚಮಚ ಉಪ್ಪನ್ನು ನೀರಿಗೆ ಸೇರಿಸಿ ಕುಡಿಯುವುದ್ರಿಂದ ಎಸಿಡಿಟಿ ಕಡಿಮೆಯಾಗುತ್ತದೆ.

* ರಕ್ತಸ್ರಾವ

ಮೂಗಿನಲ್ಲಿ ರಕ್ತ ಸೋರುತ್ತಿದ್ದರೆ ಕಾಳು ಮೆಣಸಿನ ಪುಡಿಯನ್ನು ಮೊಸರು ಹಾಗೂ ಬೆಲ್ಲದ ಜೊತೆ ಸೇರಿಸಿ ತಿನ್ನುವುದ್ರಿಂದ ರಕ್ತ ಸೋರುವುದು ಕಡಿಮೆಯಾಗುತ್ತದೆ.

* ಶೀತ-ನೆಗಡಿ

2 ಗ್ರಾಂ ಕಾಳು ಮೆಣಸಿನ ಪುಡಿಯನ್ನು ಬೆಲ್ಲದ ಜೊತೆ ಸೇರಿಸಿ ತಿನ್ನುವುದ್ರಿಂದ ಶೀತ-ನೆಗಡಿ ಕಡಿಮೆಯಾಗುತ್ತದೆ. ಕಾಳು ಮೆಣಸಿನ ಪುಡಿಯ ವಾಸನೆಯನ್ನು ತೆಗೆದುಕೊಳ್ಳುವುದ್ರಿಂದ ಸೀನು, ತಲೆನೋವು ನಿಯಂತ್ರಣಕ್ಕೆ ಬರುತ್ತದೆ.

* ಕಣ್ಣಿನ ಸಮಸ್ಯೆ

ಕಣ್ಣಿನ ದೋಷವಿರುವವರು ಪ್ರತಿದಿನ ಬೆಳಿಗ್ಗೆ ಕಾಳು ಮೆಣಸಿನ ಪುಡಿ ಜೊತೆ ಸಕ್ಕರೆ ಹಾಗೂ ತುಪ್ಪ ಬೆರೆಸಿ ತಿನ್ನುವುದು ಒಳ್ಳೆಯದು. ಇದು ದೃಷ್ಟಿಯನ್ನು ಚುರುಕುಗೊಳಿಸುತ್ತದೆ.

LEAVE A REPLY

Please enter your comment!
Please enter your name here