ಹೌದು ಗಂಡ ಹೆಂಡತಿಗಾಗಿ ಏನು ಬೇಕಾದರೂ ಮಾಡುತ್ತಾನೆ ಅನ್ನೋದಕ್ಕೆ ಸಾಕಷ್ಟು ಉದಾಹರಣೆ ಇವೆ. ನೀವು ಇದೆ ತರಹ ಹಲವು ಸಂಗತಿಗಳನ್ನು ಕೇಳಿರುತ್ತೀರ ಇಲ್ಲ, ನೋಡಿರುತ್ತೀರ. ತನ್ನ ಹೆಂಡತಿ ನೀರು ತರಲು ಬೇರೆಯವರ ಮನೆಗೆ ಹೋಗಿದ್ದಾಗ, ಅವರು ನೀರು ಕೊಡದೆ ಅವಮಾನಿಸಿ ಕಳಿಸುತ್ತಾರೆ. ಇದರಿಂದ ನೋವು ಅನುಭವಿಸಿದ ತನ್ನ ಹೆಂಡತಿಗಾಗಿ ತಮ್ಮ ಮನೆಯ ಮುಂದೆ ಬಾವಿಯನ್ನು ತೋಡಿ ನೀರು ಬರುವ ಹಾಗೆ ಮಾಡ ಬೇಕು ಎಂದು ನಿರ್ಧರಿಸುತ್ತಾನೆ.

ಮಹಾರಾಷ್ಟ್ರದ ವಾಶಿಂ ಜಿಲ್ಲೆಯ ಕಲಂಬೇಶ್ವರ್ ಗ್ರಾಮದ ದಲಿತ, ದಿನಗೂಲಿ ಕೆಲಸದ ತಾಂಜೆ ಒಬ್ಬಂಟಿಯಾಗಿ ಬಾವಿ ತೋಡಿದ್ದಾನೆ. ದಿನದಲ್ಲಿ 6 ಗಂಟೆಗಳ ಬಾವಿ ತೋಡುತ್ತಿದ್ದ ಈತನಿಗೆ 40 ದಿನಗಳ ನಂತರ ನೀರು ಸಿಕ್ಕಿದೆ. ಗ್ರಾಮದಲ್ಲಿನ ದಲಿತರೆಲ್ಲರೂ ಬೇರೊಂದು ಮನೆಯ ಬಾವಿಯಿಂದ ನೀರು ತರಬೇಕಾಗಿತ್ತು. ತಾಂಜೆಯ ಪತ್ನಿ ಸಂಗೀತ ನೀರು ತರಲು ಹೋದಾಗ ಆ ಮನೆಯವರು ಈಕೆಗೆ ನೀರು ನೀಡಲು ನಿರಾಕರಿಸಿ ಅವಮಾನ ಮಾಡಿದ್ದಾರೆ.

ತಾಂಜೇ ಹೇಳುವ ಮಾತುಗಳು …

ಸಂಗೀತ ಮನೆಗೆ ಬಂದು ನನ್ನಲ್ಲಿ ಈ ವಿಷಯವನ್ನು ಹೇಳಿದಾಗ ನಾನು ಅವಮಾನದಿಂದ ಅತ್ತು ಬಿಟ್ಟೆ. ನಾವು ಬಡವರು ಮತ್ತು ದಲಿತರಾಗಿರುವ ಕಾರಣವೇ ಅವರು ನಮ್ಮನ್ನು ಅವಮಾನಿಸಿದ್ದರು. ಅದು ಮಾರ್ಚ್ ತಿಂಗಳಾಗಿತ್ತು. ಆಗಲೇ ಇನ್ನು ಮುಂದೆ ನಾವು ಯಾರ ಬಳಿಯೂ ನೀರು ಕೇಳಲು ಹೋಗಬಾರದು ಎಂದು ತೀರ್ಮಾನಿಸಿದೆ. ನಾನು ಮಾಲೇಂಗಾವ್‌ಗೆ ಹೋಗಿ ಬಾವಿ ತೋಡಲು ಬೇಕಾದ ವಸ್ತುಗಳನ್ನೆಲ್ಲಾ ಖರೀದಿಸಿ ಬಾವಿ ತೋಡಲು ಶುರು ಮಾಡಿದೆ. ನಮ್ಮ ದಲಿತರ ಗ್ರಾಮದಲ್ಲಿ ನೀರು ಬತ್ತಿ ಹೋಗಿದ್ದು, ಅದಕ್ಕಾಗಿ ಇತರ ಜಾತಿಯವರ ಮನೆಯಿಂದ ನೀರು ತರಬೇಕಾಗಿ ಬರುತ್ತಿತ್ತು. ಇತರ ಜಾತಿಯವರು ನಾವು ದಲಿತರು ಮತ್ತು ಬಡವರು ಎಂದು ಅವಮಾನ ಮಾಡುತ್ತಾರೆ ಅಂತಾರೆ ತಾಂಜೆ.

ತಾಂಜೆ ಒಬ್ಬನೇ ಬಾವಿ ತೊಡುವ ಕೆಲಸವನ್ನು ಮಾಡಿದ್ದಾನೆ. ಮೊದ ಮೊದಲಿಗೆ ತಾಂಜೆಗೇನೋ ಹುಚ್ಚು ಎಂದು ಜನರು ನಕ್ಕಿದ್ದರು. ಹಾಗು ಅಪಹಾಸ್ಯ ಮಾಡಿದ್ದರು. ಆತನ ಪತ್ನಿ ಕೂಡಾ ಸಹಾಯಕ್ಕೆ ಬರಲಿಲ್ಲ. ಆದರೆ 40 ದಿನಗಳ ನಂತರ ಬಾವಿಯಲ್ಲಿ ನೀರು ಸಿಕ್ಕಿತು. ನೀರಿನ ಮೂಲವನ್ನು ಹುಡುಕಲು ನಾನು ದೇವರಲ್ಲಿ ಪ್ರಾರ್ಥನೆ ಮಾಡಿ ಬಾವಿ ತೋಡಲು ಆರಂಭಿಸಿದ್ದೆ ನೀರು ಸಿಕ್ಕಿದ್ದು ತುಂಬಾ ಖುಷಿಯಾಗಿದೆ. ಈಗ ನನ್ನ ಗ್ರಾಮದವರು ನೀರನ್ನು ಅರಸಿ ಬೇರೆ ಕಡೆ ಹೋಗಬೇಕಾಗಿಲ್ಲ. ದಲಿತರು ಇನ್ನೊಂದು ಜಾತಿಯವರ ಮನೆಗೆ ಹೋಗಿ ನೀರಿಗಾಗಿ ಬೇಡಬೇಕಾಗಿಲ್ಲ ಎಂಬುದಾಗಿ ತಾಂಜೇ ಹೇಳುತ್ತಾರೆ. ಅದೇನೇ ಇರಲಿ ತನ್ನ ಹೆಂಡತಿಗಾಗಿ ಹಾಗು ತನ್ನ ಸಮಾಜದವರನ್ನು ಅವಮಾನಿಸಿದವರ ಮುಂದೆ ಈತ ಮಾಡಿರುವ ಕೆಲಸ ನಿಜಕ್ಕೂ ಅದ್ಭುತವೇ ಅನ್ನಬಹುದು.

LEAVE A REPLY

Please enter your comment!
Please enter your name here