* ಊಟ ಮಾಡಿದ ತಕ್ಷಣ ನಿದ್ದೆ ಮಾಡಿದರೆ ಆಹಾರವು ಸರಿಯಾಗಿ ಜೀರ್ಣ ವಾಗದೆ ಗ್ಯಾಸ್ಟ್ರಿಕ್, ಇನ್ ಫೆಕ್ಷನ್ ಬರುವ ಅವಕಾಶಗಳು ಹೆಚ್ಚಾಗಿರುತ್ತವೆ. ಸಾಮಾನ್ಯವಾಗಿ ಊಟ ಮಾಡಿದ ನಂತರ ಯಾರಿಗಾದ್ರೂ, ನಿದ್ದೆ ಬಂದರೆ ಒಂದು ೧೦ ನಿಮಿಷಗಳು ಮಲಗಿ ಎದ್ದೇಳುವುದು ಒಳ್ಳೆಯದು. ಹಾಗೆ ನಿದ್ದೆಯನ್ನು ಮುಂದುವರಿಸಿದರೆ ಆರೋಗ್ಯಕ್ಕೆ ತೊಂದರೆ ತಪ್ಪಿದ್ದಲ್ಲ.

* ತಿಂದತಕ್ಷಣ ಈಜಾಡುವುದು ಅಪಾಯವೆಂದು ಆಯುರ್ವೇದ ಹೇಳುತ್ತದೆ. ರಕ್ತ ಪ್ರಸರಣದ ವೇಗ ಅಧಿಕವಾಗಿ ಶರೀರದ ಮಾಂಸ ಕಂಡಗಳು ಸ್ಥಗಿತಗೊಳ್ಳುತ್ತವೆಂದು ಹೇಳುತ್ತದೆ. ವ್ಯಾಯಾಮ, ಜಿಮ್, ಆಟಗಳೂ ಸಹ ಆಡಬಾರದು. ಕನಿಷ್ಠ 30 ರಿಂದ 60 ನಿಮಿಷಗಳ ಬಳಿಕವಷ್ಟೇ ಆ ಕೆಲಸಗಳನ್ನು ಮಾಡಬೇಕು.

* ತುಂಬಾ ಜನರು ಹೆಚ್ಚಾಗಿ ತಿಂದಿದ್ದೇವೆಂಬ ಉದ್ದೇಶದಿಂದ ಬೆಲ್ಟನ್ನು ಲೂಸ್ ಮಾಡಿಕೊಳ್ಳುತ್ತಾರೆ. ಹಾಗೆ ಮಾಡಬಾರದು.. ಇದರಿಂದ ಎಲ್ಲಾದರು ಸ್ಥಗಿತಗೊಂಡಿರುವ ಆಹಾರವು ಕೆಳಗೆ ಬರುವುದಿಲ್ಲ .. ಇದರಿಂದ ಸರಿಯಾಗಿ ಜೀರ್ಣವಾಗುವುದಿಲ್ಲ.

* ಧೂಮಪಾನ ಯಾವಾಗ ಮಾಡಿದರೂ ಹಾನಿಕರವೇ. ಆದರೆ ತಿಂದನಂತರ ಧೂಮಪಾನ ಮಾಡಲೇಬಾರದು. ಹಾಗೆ ಮಾಡುವುದರಿಂದ, ಒಂದೇಸಾರಿ 10 ಸಿಗೆರೆಟ್’ಗಳನ್ನು ಕುಡಿದ ಪರಿಣಾಮ ಪಿತ್ತಕೋಶದ ಮೇಲೆ ಬೀರುತ್ತದೆ. ಇದರಿಂದ ಶ್ವಾಸಕೋಶಗಳ ಮೇಲಿನ ಭಾರ ಅಧಿಕ ವಾಗುತ್ತದೆಂದು ಆಯುರ್ವೇದ ಹೇಳುತ್ತದೆ.

* ಊಟ ಮಾಡಿದ ಮೇಲೆ ತಕ್ಷಣವೇ ಹಣ್ಣನ್ನು ತಿನ್ನುವುದರಿಂದ ಆಹಾರ ಬೇಗ ಜೀರ್ಣವಾಗಿವುದಿಲ್ಲ. ಹೊಟ್ಟೆಯಲ್ಲ ಗಾಳಿಯಿಂದ ತುಂಬಿಕೊಳ್ಳುತ್ತದೆ. ಇದರಿಂದ ಅಜೀರ್ಣವಾಗುವ ಅವಕಾಶವಿರುತ್ತದೆ. ಕೆಲವು ಸಂಧರ್ಭಗಳಲ್ಲದರೆ, ಫುಡ್ ಪಾಯಿಜನ್ ಆಗುವ ಅವಕಾಶ ಇದೆ. ಒಂದು ವೇಳೆ ಪ್ರತೀದಿನ ಹಣ್ಣು ಸೇವಿಸುವ ಅಭ್ಯಾಸವಿದ್ದರೆ, ಮಾತ್ರ ಒಂದು ಗಂಟೆಯ ಮುಂಚಿತವಾಗಿ ಅಥವಾ ಗಂಟೆಯ ನಂತರ ತಿನ್ನುವುದು ಒಳ್ಳೆಯದು.

* ಬೆಳಿಗ್ಗೆಯಾದರೂ, ಸಂಜೆಯಾದರೂ ಊಟ ಮಾಡಿದ ತಕ್ಷಣ ಸ್ನಾನ ಮಾಡ ಬಾರದು. ಹಾಗೆ ಮಾಡಿದರೆ, ರಕ್ತವೆಲ್ಲವೂ ಕಾಲುಗಳಿಗೆ, ಕೈಗಳಿಗೆ ಒಟ್ಟು ದೇಹಕ್ಕೆಲ್ಲ ಹರಿದು, ಹೊಟ್ಟೆ ಹತ್ತಿರ ರಕ್ತವು ಕಡಿಮೆಯಾಗಿ, ಜೀರ್ಣ ಪ್ರಕ್ರಿಯೆಯು ನಿಧಾನವಾಗುತ್ತದೆ. ಇದರಿಂದ ಜೀರ್ಣ ವ್ಯವಸ್ಥೆಯ ಸಾಮರ್ಥ್ಯ ಕಡಿಮೆಯಾಗುತ್ತದೆ.

* ನಮ್ಮ ದೇಶದಲ್ಲಿ ಹೆಚ್ಚಿನ ಜನರು ಈ ತಪ್ಪನ್ನು ಮಾಡುತ್ತಿರುತ್ತಾರೆ. ಅನ್ನವನ್ನು ತಿಂದ ತಕ್ಷಣ ಟೀ ಕುಡಿಯುವುದರಿಂದ ಅಧಿಕ ಪ್ರಮಾಣದಲ್ಲಿ ಯಾಸಿಡ್ ಬಿಡುಗಡೆ ಯಾಗುತ್ತದೆ. ಜೀರ್ಣಕ್ರಿಯೆಯು ನಿಧಾನವಾಗಿ ಜೀರ್ಣ ವಾಗುತ್ತದೆ.

1 COMMENT

LEAVE A REPLY

Please enter your comment!
Please enter your name here