ಮನುಷ್ಯ ಎಷ್ಟೆ ಕಷ್ಟ ಬಂದರು ಕೆಲವೊಂದು ಕೆಲಸವನ್ನು ಮಾಡಲೇಬೇಕು ಅನ್ನೋ ಛಲವನ್ನು ಹೊಂದಿದಾಗ ಅದರ ಪ್ರತಿ ಫಲವನ್ನು ಕೂಡ ಕಾಣುವುದುಂಟು. ಹಾಗೆ ಈ ಸಮಾಜದಲ್ಲಿ ಎಷ್ಟೋ ಸ್ವಾರ್ಥವನ್ನು ಹೊಂದಿರುವಂತ ಜನರ ಮಧ್ಯೆ ನಿಸ್ವಾರ್ಥವನ್ನು ಹೊಂದಿರುವವರು ಇರುತ್ತಾರೆ ಅನ್ನೋದಕ್ಕೆ ಇವರು ಒಬ್ಬ ಉತ್ತಮ ಉದಾಹರೆಣೆ ಅನ್ನಬಹುದು… ಇವರು ಮಾಡುತ್ತಿರುವ ಸೇವೆಯನ್ನು ನೀವು ತಿಳಿದರೆ ಖಂಡಿತವಾಗಿಯೂ ನೀವು ಅಚ್ಚರಿ ಪಡದೆ ಇರೋದಿಲ್ಲ.

ಒಡಿಶಾದ ಬದ್ರಾಕ್ ಜಿಲ್ಲೆಯ ಗಬಾರ್ಪುರ್ ಗ್ರಾಮದ ರೈತ ನಟಬಾರ್ ನಾಯಕ್, ಎಂಬುದಾಗಿ ಇವರು ಜನರ ಸೇವೆ ಮಾಡುವ ಕೆಲಸದಲ್ಲಿ ಖುಷಿ ಕಾಣುತ್ತಾರೆ. ಇವರು ಮಾಡುವಂತ ಕೆಲಸ ಎಂತದ್ದು ಗೋತ್ತಾ?? ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರಿಗೆ ದಾಹ ತಣಿಸಿಕೊಳ್ಳಲು ಬೇಸಿಗೆ ಕಾಲದಲ್ಲಿ ಏಪ್ರಿಲ್ ನಿಂದ ಜೂನ್ ವರೆಗೆ ರಸ್ತೆ ಬದಿ ನೀರು ಇಟ್ಟುಕೊಂಡು ನಾಯಕ್ ಕುಳಿತುಕೊಳ್ಳುತ್ತಾರೆ. ಇವರು ಬೆಳಗ್ಗೆ 7 ಗಂಟೆಗೆ ತಮ್ಮ ದಿನಚರಿ ಆರಂಭಿಸಿದರೆ ಹತ್ತಿರದ ಬೋರ್ ವೆಲ್ ನಿಂದ ಮಣ್ಣಿನ ಮಡಕೆಯಲ್ಲಿ ನೀರು ತುಂಬಿಸಿಕೊಳ್ಳುತ್ತಾರೆ. ನಂತರ ಸಕಿಪತನ ಚ್ಚಕ್ ಎಂಬಲ್ಲಿ ದೊಡ್ಡ ಆಲದ ಮರದ ಕೆಳಗೆ ಕುಳಿತು ದಾರಿಯಲ್ಲಿ ಬರುವ, ಹೋಗುವವರಿಗೆ ಕುಡಿಯುವ ನೀರು ಪೂರೈಸುತ್ತಾರೆ.

ಮನುಷ್ಯರಿಗೆ ಅಷ್ಟೇ ಇವರ ಸೇವೆ ಸೀಮಿತವಾಗಿಲ್ಲ, ಬೀದಿಯಲ್ಲಿ ಓಡಾಡುವ ಪ್ರಾಣಿ ಪಕ್ಷಿಗಳ ದಾಹವನ್ನು ನೀಗುಸುವಂತ ಕೆಲಸವನ್ನು ಮಾಡುತ್ತಾರೆ. ಅವುಗಳಿಗಾಗಿ ಮಣ್ಣಿನ ಮಡಕೆಯಲ್ಲಿ ನೀರನ್ನು ಹಾಕಿ ಪ್ರಾಣಿ ಪಕ್ಷಿಗಳ ದಾಹವನ್ನು ನೀಗಿಸುತ್ತಾರೆ.

ನೀರಿನ ದಾಹವನ್ನು ಅಷ್ಟೇ ಅಲ್ಲ ನಾಯಕ್ ವಿಶೇಷ ಸಂದರ್ಭಗಳಲ್ಲಿ ನಿಂಬೆಹಣ್ಣಿನ ಶರಬತ್ತು, ಧಾನ್ಯಗಳಿಂದ ಮಾಡಿದ ಚತುವಾವನ್ನು ನೀರಿನ ಜೊತೆಗೆ ಪೂರೈಸುತ್ತಾರೆ. ಈ ಸೇವೆಯನ್ನು 30 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ.

ಈ ಇಳಿವಯಸ್ಸಿನಲ್ಲಿ ಕೆಲಸ ಮಾಡುವುದು ಸಾಕು ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಿ ಎಂದು ಮಗ-ಸೊಸೆ ಹೇಳಿದರೂ ಕೇಳುತ್ತಿಲ್ಲವಂತೆ. ನನ್ನ ಅನಾರೋಗ್ಯ ಸಮಯಗಳಲ್ಲಿಯೂ ನಾನು ಹೋಗಿ ನೀರು ಪೂರೈಸಿದ್ದೇನೆ. ಇದು ನನ್ನ ಸ್ವಂತ ನಿರ್ಧಾರ. ಜನರ ಸೇವೆ ಮಾಡಿದರೆ ದೇವರ ಸೇವೆ ಮಾಡಿದಂತೆ ಎಂದು ನಂಬುತ್ತೇನೆ ಎನ್ನುತ್ತಾರೆ ನಾಯಕ್.

ಅದೇನೇ ಇರಲಿ ಸ್ವಾರ್ಥದಿಂದ ತುಂಬಿರುವಂತ ಜನರ ಮಧ್ಯೆ ನಿಸ್ವಾರ್ಥದಿಂದ ಜನರ ಸೇವೆಯನ್ನು ಮಾಡಿದರೆ ದೇವರ ಸೇವೆ ಮಾಡಿದಂತೆ ಎಂಬುದಾಗಿ ಅಂದುಕೊಂಡಿರುವ ಈ ಹಿರಿಯ ಜೀವಕ್ಕೆ ಆ ದೇವರು ಉತ್ತಮ ಆರೋಗ್ಯ ಕೊಟ್ಟು ಒಳ್ಳೆಯ ರೀತಿಯಲ್ಲಿ ಇಟ್ಟಿರಲಿ ಅನ್ನೋದೇ ನಮ್ಮ ಆಶಯ.

 

LEAVE A REPLY

Please enter your comment!
Please enter your name here