ವಾಂಗಿ ಬಾತ್ ಕೆಲ ಮಂದಿ ತುಂಬಾನೇ ಎಷ್ಟ ಪಡುವಂತ ತಿಂಡಿ ಆಗಿದೆ. ಇದನ್ನು ನಿಮ್ಮ ಮನೆಯಲ್ಲಿಯೂ ತಯಾರಿಸಬಹುದು ಈ ಸರಳ ವಿಧಾನದ ಮೂಲಕ… ಹೇಗೆ ಅನ್ನೋದನ್ನ ಮುಂದೆ ತಿಳಿಸಿದ್ದೀವಿ ನೋಡಿ…

ಬೇಕಾಗುವ ಸಾಮಾಗ್ರಿಗಳು

ಕಡ್ಲೆಬೇಳೆ – ಎರಡು ಚಮಚ

ಹುಣಸೆಹಣ್ಣು – ಸ್ವಲ್ಪ

ಚಕ್ಕೆ – ಸ್ವಲ್ಪ

ಲವಂಗ – ಸ್ವಲ್ಪ

ಅರಿಶನ – ಅರ್ಧ ಚಮಚ

ದನಿಯಾ – ಒಂದು ಚಮಚ

ಉಪ್ಪು- ರುಚಿಗೆ ತಕ್ಕಷ್ಟು

ಅಕ್ಕಿ- ಒಂದುವರೆ ಬಟ್ಟಲು

ಸಾಸಿವೆ – ಒಂದು ಚಮಚ

ಉದ್ದಿನಬೇಳೆ – ಒಂದು ಚಮಚ

ಕರಿಬೇವು – ಸ್ವಲ್ಪ

ಏಲಕ್ಕಿ – ೩-೪

ಒಣಮೆಣಸಿನ ಕಾಯಿ ೬-೭

ಮೆಂತ್ಯ – ಒಂದು ಚಮಚ

ಕೊಬ್ಬರಿ – ಅರ್ಧ ಬಟ್ಟಲು

ಉದ್ದ ಬದನೆಕಾಯಿ – ೩-೪

ತಯಾರಿಸುವ ವಿಧಾನ…

ನೀವು ಎಲ್ಲದಕ್ಕಿಂತ ಮೊದಲು ಅಕ್ಕಿ ತೊಳೆದು ಅನ್ನವನ್ನು ಮಾಡಿಟ್ಟುಕೊಂಡು, ಅನ್ನ ತಣ್ಣಗಾಗಲು ಬಿಡಬೇಕು. ನಂತರ
ಸಣ್ಣ ಬಟ್ಟಲು ತೆಗೆದುಕೊಂಡು ಅದಕ್ಕೆ ಹುಣಸೆಹಣ್ಣು, ಸ್ವಲ್ಪ ನೀರು ಹಾಕಿ ನೆನೆಯಲು ಬಿಡಬೇಕು.
ಮತ್ತೊಂದು ಪ್ಯಾನ್ ನಲ್ಲಿ ಬಿಸಿ ಮಾಡಿ ನಂತ ಕಡ್ಲೆಬೇಳೆ, ಉದ್ದಿನಬೇಳೆ, ದನಿಯಾ, ಮೆಂತ್ಯ, ಚಕ್ಕೆ, ಏಲಕ್ಕಿ, ಲವಂಗ, ಒಣಗಿದ ಮೆಣಸಿನ ಕಾಯಿ, ಅರಿಶಿನ ಹಾಗೂ ಕೊಬ್ಬರಿ ಎಲ್ಲವನ್ನು ಕೆಂಪಗೆ ಹುರಿದುಕೊಂಡು ತಣ್ಣಗಾಗಲು ಬಿಡಬೇಕು.

ತಣ್ಣಗಾದ ಬಳಿಕ ಮಿಕ್ಸಿ ಜಾರ್ ಗೆ ಪುಡಿ ಮಾಡಿಕೊಳ್ಳಿ ಬದನೆಕಾಯಿಯನ್ನು ಚೆನ್ನಾಗಿ ತೊಳೆದೆ ಉದ್ದುದ್ದವಾಗಿ ಹೆಚ್ಚಿಕೊಳ್ಳಬೇಕು.
ನಂತರ ಮತ್ತೊಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ, ಕಡ್ಲೆಬೇಳೆ, ಉದ್ದಿನಬೇಳೆ, ಅರಿಶಿನ, ಕರಿಬೇವಿನ ಸೊಪ್ಪು ಹಾಗಿ ಒಗ್ಗರಣೆ ಮಾಡಿ ಹೆಚ್ಚಿಕೊಂಡ ಬದನೆಕಾಯಿ ಹಾಕಿ ಹುರಿಯಬೇಕು.

10 ನಿಮಿಷದ ನಂತರ ಹುಣಸೆಹಣ್ಣಿನ ರಸ ಸೇಸಿ 5-10 ನಿಮಿಷ ಬದನೆಕಾಯಿ ಬೇಯಲು ಬಿಡಬೇಕು. ಕೊನೆಯ ಹಂತದಲ್ಲಿ ವಾಂಗೀಬಾತ್ ಪುಡಿ, ಉಪ್ಪು, ಅನ್ನವನ್ನು ಸೇರಿಸಿ ಮಿಶ್ರಣವನ್ನು ಅನ್ನಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ ರುಚಿಕರವಾದ ವಾಂಗಿಬಾತ್ ರೆಡಿ ಇರುತ್ತದೆ.

LEAVE A REPLY

Please enter your comment!
Please enter your name here