ನಮ್ಮ ಆರೋಗ್ಯದ ಬಗ್ಗೆ ತಿಳಿಯಲು ವೈದ್ಯರು ನಮ್ಮನ್ನ ವಿವಿಧ ಯಂತ್ರಗಳ ಮೂಲಕ ಪರೀಕ್ಷೆ ಮಾಡುತ್ತಾರೆ. ಕೆಲವೊಮ್ಮೆ ದೇಹದೊಳಗಿನ ಸಮಸ್ಯೆಯನ್ನ ತಿಳಿಯಲು ಎಕ್ಸ್-ರೇ ಎಂಬ ಯಂತ್ರದ ಸಹಾಯ ಪಡೆಯುತ್ತಾರೆ. ಈ ಯಂತ್ರವು ನಮ್ಮ ದೇಹದಲ್ಲಿನ ಸಮಸ್ಯೆಗಳನ್ನ ವೈದ್ಯರು ತಿಳಿಯಲು ಸಹಾಯ ಮಾಡುತ್ತದೆ. ನಮ್ಮ ದೇಹದಲ್ಲಿನ ಸಮಸ್ಯೆಗರು ಗಂಭೀರವಾಗಿದ್ದಾಗ ಇದನ್ನ ಬಳಸುತ್ತಾರೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಎಕ್ಸ್-ರೇ ಇಲ್ಲದೆ ತಿಳಿಯಲು ಆಗದೆ ಇರುವ ಸಮಸ್ಯೆಯನ್ನ ಇಲ್ಲೊಬ್ಬ ಮಹಿಳೆ ಯಂತ್ರದ ಸಹಾಯವಿಲ್ಲದೆ ತನ್ನ ಕಣ್ಣಿನಿಂದಲೇ ಕಂಡು ಹಿಡಿಯುತ್ತಾಳೆ.

ಹೌದು ಇದು ನಂಬಲಾಗದ ವಿಷಯವಾದರೂ ನೀವು ಇದನ್ನ ನಂಬಲೇ ಬೇಕು. ರಷ್ಯಾದ ನತಾಶಾ ಡಮ್ಕಿನಾಳನ್ನು ಓಡಾಡುವ, ಮಾತನಾಡೋ ಎಕ್ಸ್-ರೇ ಮಶಿನ್ ಎಂದು ಕರೆಯುತ್ತಾರೆ. ಈಕೆ ಕಣ್ಣು ಎಕ್ಸ್ ರೇ ಮಶಿನ್ ರೀತಿಯಲ್ಲಿ ಕೆಲಸ ಮಾಡುತ್ತದೆ. ನತಾಶಾಳ ಈ ದಿವ್ಯ ಶಕ್ತಿಯನ್ನ ತಿಳಿದ ಎಷ್ಟೋ ವಿಜ್ಞಾನಿಗಳು ಆಶ್ಚರ್ಯ ಪಟ್ಟು, ತಬ್ಬಿಬ್ಬಾಗಿದ್ದರೆ.

ನತಾಶಾಳ ಈ ಅದ್ಬುತ ಶಕ್ತಿಯ ರಹಸ್ಯವನ್ನ ಕಂಡುಹಿಡಿಯಲು ವೈದ್ಯರಿಗೆ ಈವರೆಗೂ ಸಾಧ್ಯವಾಗಿಲ್ಲ. ದೇಹವನ್ನು ನೋಡಿದ ನಂತರ ಕೆಲ ಸಮಯ ತೆಗೆದುಕೊಂಡು ಏನು ರೋಗ ಎಂಬುದನ್ನು ನತಾಶಾ ಹೇಳ್ತಾಳೆ. ಮನುಷ್ಯನ ದೇಹವನ್ನು ಬರಿಗಣ್ಣಿನಲ್ಲಿ ನೋಡಿ ಆತನಿಗೆ ಯಾವ ಖಾಯಿಲೆಯಿದೆ ಎಂಬುದನ್ನು ನತಾಶಾ ಹೇಳ್ತಾಳೆ. ಇದು ವಿಚಿತ್ರವಾದರೂ ಸತ್ಯ.

LEAVE A REPLY

Please enter your comment!
Please enter your name here