ಹೌದು ವಿದ್ಯೆ ಕಲಿಸಿದ ಗುರುಗಳನ್ನು ತಮ್ಮ ಶಿಷ್ಯರು ಇಂದಿಗೂ ಮರೆಯುವುದಿಲ್ಲ. ಅಂತಹ ನೆನಪಲ್ಲಿ ಉಳಿಯುತ್ತಾರೆ ಗುರುಗಳು. ತಂದೆ ತಾಯಿಯರ ಸ್ಥಾನದಲ್ಲಿ ಗುರುಗಳನ್ನು ಕಾಣುತ್ತವೆ. ಹಾಗು ಆ ಗುರುಗಳು ನಮ್ಮನ ಜೀವನದ ಮೌಲ್ಯವನ್ನು ಕಲಿಸಿ ಕೊಡುತ್ತಾರೆ. ಅಂತಹ ಗುರುಗಳನ್ನು ಮರೆಯುವುದುಂಟೆ. ಫೇಸ್ ಮೂಲಕ ಇವರು ನಮ್ಮ ಶಿಕ್ಷಕಿ ಎಂದು ಗುರುತಿಸಿದ್ದಾರೆ.

ಸರ್ಕಾರಿ ನೌಕರರಾದ ವಿದ್ಯಾ ಎಂ ಆರ್ ಎನ್ನುವವರು ತಮ್ಮ ಸ್ನೇಹಿತೆಯ ಭೇಟಿಗೆ ತಂಪೊರ್ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದರು. ಆ ಸಮಯದಲ್ಲಿ ಇವರ ಗಮನಕ್ಕೆ ಈ ಶಿಕ್ಷಕಿ ಕಾಣುತ್ತಾರೆ. ಬಿಕ್ಷಕಿಯ ರೀತಿಯಲ್ಲಿ ಹಳೆ ಬಟ್ಟೆಯೊಂದಿಗೆ ಹಾಗು ಹೆಗಲ ಮೇಲೆ ಒಂದು ಪ್ಲಾಸ್ಟಿಕ್ ಚೀಲ ಹಾಕಿ ಕೊಂಡು ಅಲ್ಲೇ ಹತ್ತಿರದಲ್ಲಿರುವ ಒಂದು ಮರದಲ್ಲಿ ಹಣ್ಣು ಕೀಳುತ್ತಾ. ತಿನ್ನುತ್ತಾ ಇರುತ್ತಾರೆ. ಇದನ್ನು ಗಮನಿಸಿದ ವಿದ್ಯಾ ಅವರು ಹಸಿವಿನಿಂದ ಪಾಪ ಹೇಗೆಲ್ಲ ಮಾಡುತ್ತಿದ್ದಾರೆ ಅಂದುಕೊಂಡು ಆ ಶಿಕ್ಷಕಿಯ ಹತ್ತಿರ ಬಂದು ಊಟ ಕೊಡಿಸಲೇ ಎಂದು ಕೇಳುತ್ತಾರೆ.

ಆದರೆ ಆ ಶಿಕ್ಷಕಿ ನನಗೆ ಹಸಿವು ಇಲ್ಲ ಅನ್ನುತ್ತಾರೆ. ಆದರೂ ಸುಮ್ಮನಾಗದ ವಿದ್ಯಾ ಅವರು ಅವರಿಗೆ ಇಡ್ಲಿ ವಡಾ ತಂದು ಕೊಡುತ್ತಾರೆ. ಆಗ ಊಟ ಮಾಡುತ್ತಲೇ ವಿದ್ಯಾ ಅವರ ಜೊತೆಯಲ್ಲಿ ಮಾತಾಡುತ್ತ ಹೇಳುತ್ತಾರೆ ತಾನು ವೃತ್ತಿಯಲ್ಲಿ ಶಿಕ್ಷಕಿ ಎಂಬುದಾಗಿ ಆದರೆ ಆ ಶಿಕ್ಷಕಿ ಯಾವ ಕಾರಣಕ್ಕೆ ಹೀಗಿದ್ದರೆ ಅನ್ನೋದು ತಿಳಿದು ಬಂದಿಲ್ಲ.

ವಿದ್ಯಾ ಅವರು ಈ ಒಂದು ಸಂಗತಿಯನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಗಮನಿಸಿದ ತಮ್ಮ ವಿದ್ಯಾರ್ಥಿಗಳು ಇವರು ನಮ್ಮ ವಲ್ಸಾ ಟೀಚರ್ ಎಂದು ಗುರುತಿಸಿದ್ದಾರೆ. ಹಾಗು ತಮಗೆ ವಿದ್ಯೆ ನೀಡಿದ ಶಿಕ್ಷಿಯನ್ನು ಮನೆಗೆ ಕರೆದ್ಯೋಯಲ್ಲೂ ಮುಂದಾಗುತ್ತಾರೆ ಆದರೆ ಆ ಶಿಕ್ಷಕಿ ನನ್ನ ಮಗ ಹಾಗು ನನ್ನ ಪತಿಯವರು ಬಂದು ಕರೆದುಕೊಂಡು ಹೋದರೆ ಬರುತ್ತೇನೆ ಎಂದು ಹೇಳುತ್ತಾರೆ. ಇದರ ಬಗ್ಗೆ ಪೊಲೀಸರು ಅವರ ಪತಿ ಹಾಗು ಮಗನ ಹುಡುಕಾಟದಲ್ಲಿದ್ದಾರೆ.

LEAVE A REPLY

Please enter your comment!
Please enter your name here