ಮಂಗಳೂರಿನ ಬಳಿ ಇರುವ ಸುಂದರವಾದ ಐತಿಹಾಸಿಕ ದೇವಾಲಯ ಆಗಿರುವಂತ ಕುದ್ರೋಳಿ ಗೋಕಣೇ೯ಶ್ವರ ದೇವಲಯ ಈ ದೇವಾಲಯ ಹಲವು ವಿಶೇಷತೆಯಿಂದ ಕೂಡಿದೆ ಹಾಗು ಈ ದೇವಾಲಯದ ಮಹತ್ವ ಎಂತದ್ದು ಗೊತ್ತಾ ೧೮ನೇ ಶತಮಾನದ ಹಿಂದ್ದಕ್ಕೆ ನೋಡಿದರೆ,ಈ ದೇವಾಲಯದಲ್ಲಿ ಕೆಲ ವಗ೯ದ ಜನರಿಗೆ ದೇವಾಲಯದೊಳಗೆ ಪ್ರವೇಶವನ್ನು ನಿಷೇದಿಸಲಾಗಿತ್ತು,ಆದ್ದಂರಿಂದ ಕೆಲವು ಧಾಮಿ೯ಕ ನಾಯಕರು ಈ ವ್ಯವಸ್ಥೆಯನ್ನು ಪ್ರಶ್ನಿಸಲು ಪ್ರಾರಂಭಿಸಿದರು.

ಅದರಲ್ಲಿ ಪ್ರಮುಖರು ‘ಬ್ರಹ್ಮಷಿ೯ ನಾರಾಯಣ ಗುರು’ಇವರು ಕೇರಳಾದಲ್ಲಿ ಧಮ೯ ಕ್ರಾಂತಿಯನ್ನು ಹುಟ್ಟುಹಾಕಿದವರು.ಧಾಮಿ೯ಕತೆಯ ಆಧಾರದ ಮೆಲೆ ನಡೆಯುತ್ತಿದ್ದ ಅಸ್ಪೃಶ್ಯತೆ,ತಾರತಮ್ಯವನ್ನು ಪ್ರಶ್ನಿಸಿದವರು.ಅವರ ಪ್ರತಿಪಾದನೆ’ದೇವರಿಂದ ಸೃಷ್ಟಿಸಲ್ಪಟ್ಟ ಎಲ್ಲಅ ಜೀವಿಗಳಿಗು ದೇವರನ್ನು ಪೂಜಿಸುವ ಅಧಿಕಾರವಿದೆ’.ಇರುವುದು ‘ಒಂದೇ ದೇವರು ಮತ್ತು ಒದೇ ಧಮ೯’. ಎವರು ಕೇರಳಾದಲ್ಲಿ ೧೦೧ ಕ್ಕೂ ಹೆಚ್ಚು ದೇವಾಲಯಗಳನ್ನು ನಿರ್ಮಾಣ ಮಾಡಿ, ಎಲ್ಲಾ ಜನರಿಗು ದೇವಲಯದ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಿ ಕೊಟ್ಟರು.

ಇವರ ಈ ಧಾಮಿ೯ಕ ಚಳುವಳಿಯಲ್ಲಿ ಶ್ರೀ ಸಾಹುಕಾರ್ ಕೊರಗಪ್ಪ ಅವರ ನಾಯಕತ್ವದ ಮಂಗಳೂರಿನ ತಂಡವು ಇವರೊಂದಿಗೆ ಸೇರಿತು.ಶ್ರೀ ನಾರಾಯಣ ಗುರುಜಿ ಅವರು ಒಂದು ಶಿವಲಿಂಗವನ್ನು ನಿಮಾ೯ಣ ಮಾಡಿ ಕುದ್ರೋಳಿಗೆ ತಂದರು. ಅದನ್ನು ೧೯೧೨ರಲ್ಲಿ ಕುದ್ರೋಳಿಗೆ ತಂದು ಸ್ಥಾಪನೆ ಮಾಡಲಾಯಿತು. ಅಂದಿನಿಂದ ಈ ದೇವಾಲಯ ;ಕುದ್ರೋಳಿ ಗೋಕಣೇ೯ಶ್ವರ’ಎಂದು ಪ್ರಸಿದ್ದವಾಯಿತು.

ವಿಶೇಷ…
ಆಧುನಿಕ ಶೈಲಿಯ ಶಿಲ್ಪಕಲೆಯಲ್ಲಿ ನಿಮಾ೯ಣಗೊಂಡಿರುವ ಈ ದೇವಸ್ಥಾನವು ವಿಶಾಲವಾದ ಪ್ರವೇಶದ್ವಾರವನ್ನು ಹೊಂದಿದೆ.ಲಕ್ಷಾಂತರ ಯಾತ್ರಿಗಳು,ವಿವಿಧ ಸಮುದಾಯದ ಜನರು,ದಾಮಿ೯ಕ ನಂಬಿಕೆ ಉಳ್ಳವರು ಈ ಸ್ವಾಮಿಯ ಭಕ್ತಿಗೆ ಪಾತ್ರರಾಗಿದ್ದಾರೆ, ಈ ದೇವಲಯದ ಬಳಿ ಇರುವ ಹುಲ್ಲಿನ ಸೇವನೆ ಇಂದ ಅನೇಕ ರೋಗಗಳಿಂದ ಬಳಿಲುತಿದ್ದ ಜನರು ಕಾಯಿಲೆಗಳಿಂದ ಗುಣಮುಕ್ತರಾಗಿದ್ದಾರೆ. ಅನ್ನೋ ಮಾತು ಭಕ್ತರದ್ದು.

LEAVE A REPLY

Please enter your comment!
Please enter your name here