ಹೌದು ನಮ್ಮ ರಾಷ್ಟ್ರ ಹಿಂದೂ ರಾಷ್ಟ್ರ ಆದರೂ ನಮ್ಮ ಭಾರತದಲ್ಲಿ ಜಾತ್ಯತೀತತೆ ಇದೆ ಹಾಗಾಗಿ ವಿವಿಧ ರೀತಿಯ ಧರ್ಮಗಳು , ಜಾತಿಗಳು ಇವೆ. ಆದರೆ ಇಲ್ಲಿ ನಮ್ಮ ಭಾರತದ ರಾಷ್ಟ್ರೀಯ ಧ್ವಜ ಆದಂತ ಕೇಸರಿ. ಬಿಳಿ . ಹಸಿರು… ಹೊಂದಿರುವ ಧ್ವಜ ತನ್ನದೇ ಯಾದ ವೈಶಿಷ್ಟತೆಯನ್ನು ಹೊಂದಿದೆ. ಕೇಸರಿ =ಹಿಂದೂ +ಬಿಳಿ =ಕ್ರಿಸ್ತರು+ಹಸಿರು= ಮುಸ್ಲಿಂ ಅನ್ನೋ ಭಾವೈಕ್ಯತೆಯನ್ನು ಹೊಂದಿದೆ.

ಈಗಿರುವಾಗ ಹಿಂದೂ ಮುಸ್ಲಿ ಕೋಮುಗಲಭೆಗಳು, ವಿರೋಧಗಳು ಆಗುತ್ತಿರುವುದು ಪ್ರಸ್ತುತ ದಿನಗಳಲ್ಲಿ ನಡಿಯುತ್ತಿದೆ. ಅಂತಹ ಸಮಾಜದಲ್ಲಿ ಈ ಇವರು ನಾವೆಲ್ಲರೂ ಒಂದೇ ಅನ್ನೋ ಭಾವನೆಯನ್ನು ಹೊಂದಿದ್ದಾರೆ.
ಇವರ ಹೆಸರು ನೂರ್ ಹುಲ್ಲಾ ಹಸನ್ ಎಂಬುದಾಗಿ ..ಮುಸ್ಲಿಂ ಧರ್ಮದವರು ಈ ಎಲ್ಲದಕ್ಕಿಂತ ಮುಂಚೆ ನಾನು ಭಾರತಿಯವನು ಅನ್ನುತ್ತಾರೆ ಇವರು.

ತಮ್ಮ ಮನೆಯ ಹತ್ತಿರದ ಹಿಂದೂ ದೇವಾಲಯಕ್ಕೆ ಇವರ ಮನೆ ಜಾಗ ಎದುರಾಗಿತ್ತು ಆಗಾಗಿ ಇವರ ಜಾಗ ಆ ದೇವಾಲಯಕ್ಕೆ ಬೇಕಾಗುವ ಅವಶ್ಯಕತೆ ಹೆಚ್ಚಿನದಾಗಿತ್ತು. ಅಂತ ಸಂದರ್ಭದಲ್ಲಿ ಇವರು ಯಾವುದೇ ಜಾತಿ ಧರ್ಮ ಎನ್ನದೆ ನಾವೆಲ್ಲರೂ ಒಂದೇ ಮಾನವ ಕುಲದವರು ಎಂಬುದಾಗಿ ತಿಳಿದು ಆ ದೇವಾಲಯಕ್ಕೆ ಜಾಗ ಕೊಡುತ್ತಾರೆ. ಅಲ್ಲದೆ ಹಿಂದೂ ಜನರು ಯಾವೆಲ್ಲ ರೀತಿಯಲ್ಲಿ ಪೂಜಿಸುತ್ತಾರೆ ಹಾಗು ಪ್ರಸಾದವನ್ನು ಸ್ವೀಕರಿಸುತ್ತಾರೋ ಅವೆಲ್ಲವುಗಳನ್ನು ಇವರ ಕುಟುಂಬದವರು ಪಾಲಿಸುತ್ತಾರೆ.

ಇದರ ಕುರಿತು ಅವರು ಹೇಳುವಂತ ಮಾತುಗಳು…..

ಮೊದಲು ನಾವು ಮಾನವ ಎಂಬುದನ್ನು ಅರಿತು ಕೊಳ್ಳಬೇಕು. ಎಲ್ಲ ದೇವರು ಒಂದೇ ಹಾಗು ಧರ್ಮಗಳು ಬೇರೆ ಬೇರೆ ಆಗಿದ್ದರು ನಾವೆಲ್ಲರೂ ಒಂದೇ ಅಂದು ಕೊಂಡು ಸಹಬಾಳ್ವೆಯಿಂದ ನಡೆದು ಕೊಂಡು ಹೋಗ ಬೇಕು. ಸತ್ತಾಗ ನಮ್ಮ ಜೊತೆ ಈ ಲೋಕದಲ್ಲಿರುವ ಯಾವುದು ಕೂಡ ಬರುವುದಿಲ್ಲ.. ಬರುವಾಗ ಹೇಗೆ ಬರುತ್ತೇವೋ… ಸತ್ತ ಮೇಲೆಯೂ ಹಾಗೆ ಹೋಗುತ್ತೇವೆ. ಇರುವಷ್ಟು ದಿನ ಎಲ್ಲರು ಒಂದೇ ಅನ್ನೋ ಭಾವನೆಯೊಂದಿಗೆ ಬದುಕ ಬೇಕು.

ಅಲ್ಲದೆ ನಾವು ಎಲ್ಲರು ಒಂದೇ ಭಾರತೀಯರು ಅನ್ನೋದನ್ನ ತಿಳ್ದು ಕೊಳ್ಳ ಬೇಕು ಅನ್ನೋ ಮಾತುಗಳನ್ನು ಹೇಳುತ್ತಾರೆ..  ಇವರ ಮಾತುಗಳು ಎಲ್ಲರಿಗು ಸ್ಪೂರ್ತಿದಾಯಕ ವಾಗಿದೆ.

LEAVE A REPLY

Please enter your comment!
Please enter your name here