ನಮ್ಮ ಟೆಕ್ನಲಾಜಿ ದಿನದಿಂದ ದಿನಕ್ಕೆ ಎಷ್ಟೊಂದು ವೇಗವಾಗಿ ಬದಲಾಗುತ್ತಿದೆ ಎಂಬುದು ನಮ್ಮೆಲರಿಗೂ ತಿಳಿದಿರುವ ವಿಷಯ. ಆಧುನಿಕ ಟೆಕ್ನಾಲಜಿಯಿಂದಾಗಿ ನಾವು ಬಹಳ ವೇಗವಾಗಿ ನಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಹಿಂದಿನ ಕಾಲಕ್ಕಿಂತ ಈಗ ಕೆಲಸದ ವೇಗ ಸಾಕಷ್ಟು ಬೆಳೆದಿದೆ. ನಮ್ಮ ಕೆಲಸದ ವೇಗವನ್ನು ಹೆಚ್ಚಿಸಿದ ಆಧುನಿಕ ಪರಿಕರಗಳಲ್ಲಿ ಮೊಬೈಲ್ಗಳು ಸಹ ಇವೆ. ಈ ಮೊಬೈಲ್ಗಳಿಂದಾಗಿ ಇಂದು ನಾವು ಬಹಳ ವೇಗವಾಗಿ ನಮ್ಮ ಕೆಲಸಗಳನ್ನ ಮಾಡುತ್ತಿದ್ದೇವೆ. ಆದರೆ ಈ ಮೊಬೈಲ್ಗಳಿಂದ ಬರುವ ರೇಡಿಯೇಶನ್ನಿಂದ ನಮಗೆ ಆಗುವ ತೊಂದರೆಗಳ ಬಗ್ಗೆ ನಾವು ನೀವುಗಳ್ಯಾರು ಗಮನ ಹರಿಸಿಲ್ಲ.

ಈ ರೇಡಿಯೇಶನ್ ಗಳಿಂದ ಹಲವಾರು ಅರೋಗ್ಯ ಸಮಸೆಗಳು ಕಂಡು ಬರುತ್ತವೆ. ಐದರಿಂದ ಈಗಾಗಲೇ ಬಹಳಷ್ಟು ಜನರು ತೊಂದರೆಗೆ ಈಡಾಗಿದ್ದಾರೆ. ಈ ಮೊಬೈಲ್ ರೇಡಿಯೇಶನ್ನಿಂದ ನಮ್ಮ ಕಿವಿಗಳಿಗೆ ಬಹಳ ತೊಂದರೆ ಆಗುತ್ತದೆ ಎಂಬುದು ಎಲ್ಲರಿಗೂ ಗೊತ್ತು ಆದರೆ ಈ ತೊಂದರೆ ಹೊರಗಿನವರಿಗೆ ಕಾಣುವುದಿಲ್ಲ. ಮೊಬೈಲ್ಗೆ ಕರೆಗಳು ಬಂದಾಗ ನಾವು ಬಲ ಕಿವಿಗೆ ಇಟ್ಟು ಮಾತನಾಡುವುದೇ ಹೆಚ್ಚು, ಆದರೆ ಬಲ ಕಿವಿಯಲ್ಲಿ ಮಾತನಾಡುವುದರಿಂದ ಬಹಳಷ್ಟು ತೊಂದರೆಗಳಾಗುತ್ತವೆ. ಬಲಗಡೆ ಕಿವಿಯ ಬಳಿ ಫೋನ್ ಇಟ್ಟುಕೊಂಡು ಮಾತನಾಡಬಾರದು. ಎಡ ಕಿವಿ ಬಳಿ ಮಾತ್ರ ಫೋನ್ ಇಟ್ಟುಕೊಂಡು ಮಾತನಾಡಬೇಕು ಯಾಕೆ.

ಫೋನ್ ರಿಂಗಾಗುತ್ತಿದ್ದಂತೆ ಅದನ್ನು ಬಲಗಿವಿಗೆ ಇಟ್ಟು ಮಾತನಾಡುವುದು ಬಹಳಷ್ಟು ಮಂದಿಗೆ ಅಭ್ಯಾಸವಾಗಿರುತ್ತದೆ. ಇನ್ನೂ ಕೆಲವರು ಕಿವಿಗೆ ಭುಜಗಳಿಂದ ಹಿಡಿದು ಬೈಕ್ ಅಥವಾ ಕಾರು ಡ್ರೈವ್ ಮಾಡ್ತಾ ಮಾತನಾಡುತ್ತಾರೆ. ಆ ರೀತಿ ಫೋನನ್ನು ಬಲ ಕಿವಿ ಬಳಿ ಇಟ್ಟುಕೊಂಡು ಮಾತನಾಡುವುದರಿಂದ ಫೋನ್ನಿಂದ ಹೊರಹೊಮ್ಮುವ ಸಾಧಾರಣ ರೇಡಿಯೇಷನ್ ಮಿದುಳಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದಂತೆ. ಅಷ್ಟೇ ಅಲ್ಲದೆ, ಈ ರೀತಿ ಮಾತನಾಡುವುದರಿಂದ ಕೆಲವರಿಗೆ ಕಿವಿಗಳು ಸರಿಯಾಗಿ ಕೇಳಿಸದೆ ಹೋಗುವ ಸಾಧ್ಯತೆಗಳು ಇರುತ್ತವೆ.

ಬಲ ಕಿವಿ ಬಳಿ ಫೋನ್ ಇಟ್ಟುಕೊಂಡು ಮಾತನಾಡಿದರೆ ಯಾವ ರೀತಿ ಅಡ್ಡಪರಿಣಾಮಗಳು ಆಗುತ್ತವೆ ಎಂಬುದನ್ನು ಕೆಲವರು ವಿಜ್ಞಾನಿಗಳು ಸಂಶೋಧನೆಗಳನ್ನೂ ಮಾಡ್ದಿದ್ದಾರೆ. 20ರಿಂದ 25 ವಯಸ್ಸಿನ ಯುವಕ/ಯುವತಿಯರನ್ನು ಆಯ್ಕೆ ಮಾಡಿಕೊಂಡು ಅವರ ಮೇಲೆ ವಿಜ್ಞಾನಿಗಳು ಪ್ರಯೋಗ ಮಾಡಿದ್ದಾರೆ. ಇದರಿಂದ ಅವರು ಕಂಡುಕೊಂಡಿದ್ದೇನೆಂದರೆ, ಬಲ ಕಿವಿ ಬಳಿ ಫೋನ್ ಇಟ್ಟುಕೊಂಡು ಮಾತನಾಡುವವರ ಆರೋಗ್ಯ, ಇತರರಿಗೆ ಹೋಲಿಸಿದರೆ ತುಂಬಾ ಕ್ಷೀಣಿಸಿತೆಂದು ಗೊತ್ತಾಗಿದೆ. ಎಡ ಕಿವಿ ಬಳಿ ಫೋನ್ ಇಟ್ಟುಕೊಂಡು ಮಾತನಾಡಿದವರನ್ನು ಪರಿಶೀಲಿಸಿದ ಮೇಲೆ ಅವರ ಆರೋಗ್ಯ ಸ್ವಲ್ಪ ಕ್ಷೀಣಿಸಿತ್ತಾದರೂ, ಬಲ ಕಿವಿಯವರಿಗೆ ಹೋಲಿಸಿದರೆ ಅದು ಕಡಿಮೆ ಎಂದು ಗೊತ್ತಾಯಿತು.

ಆದಕಾರಣ ಫೋನ್ನಲ್ಲಿ ಮಾತನಾಡಬೇಕಾದರೆ ಎಡಗಿವಿ ಬಳಿ ಫೋನ್ ಇಟ್ಟುಕೊಂಡು ಮಾತನಾಡಿದರು ಸ್ವಲ್ಪ ದೂರವಾಗಿ ಪೋನನ್ನು ಇಟ್ಟುಕೊಂಡು ಮಾತನಾಡಿದರೂ ಪರಿಣಾಮ ಇನ್ನೂ ಕಡಿಮೆ ಇರುತ್ತದೆ ಎಂದು ಸದರಿ ವಿಜ್ಞಾನಿಗಳು ಹೇಳುತ್ತಿದ್ದಾರೆ. ಇನ್ನು ಮುಂದೆ ನೀವೂ ಅಷ್ಟೇ ಫೋನಲ್ಲಿ ಮಾತನಾಡಬೇಕಾದರೆ ಮೇಲೆ ಹೇಳಿದಂತೆ ಮಾಡಿ..! ಏನೇ ಆಗಲಿ ನಮ್ಮ ಆರೋಗ್ಯ ನಮಗೆ ಮುಖ್ಯ ಅಲ್ವಾ…?

LEAVE A REPLY

Please enter your comment!
Please enter your name here