ಯಾವ ಮಹಿಳೆಯರಿಗೆ ಇಷ್ಟವಿಲ್ಲ ಹೇಳಿ ಕಾಲ್ಗೆಜ್ಜೆ ಎಂದರೆ. ಇತ್ತೀಚಿನ ದಿನಗಳಲ್ಲಿ ಕೇವಲ ಹಬ್ಬ ಹರಿದಿನಗಳಲ್ಲಿ ಮಾತ್ರ ಕಾಲಿಗೆ ಗೆಜ್ಜೆಯನ್ನ ಧರಿಸುತ್ತಾರೆ. ಆದರೆ ಹಿಂದಿನ ಜನರು ಹೆಚ್ಚಾಗಿ ಪ್ರತಿ ನಿತ್ಯ ಗೆಜ್ಜೆಯನ್ನ ಧರಿಸುತ್ತಿದ್ದರು. ಈಗ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ವಿನ್ಯಾಸದ ಗೆಜ್ಜೆಗಳು ಲಭ್ಯವಿವೆ. ಈ ಕಾಲ್ಗೆಜ್ಜೆಯನ್ನ ಕೇವಲ ಕಾಲಿನ ಅಂದ ಹೆಚ್ಚಿಸಲು ಮಾತ್ರ ದರಿಸುತ್ತಿರಲಿಲ್ಲ. ಇದರ ಹಿಂದೆ ಅನೇಕ ಮಹತ್ವದ ವಿಷಗಳಿವೆ.

ನಮ್ಮ ಭಾರತೀಯ ಸಂಸೃತಿಯಲ್ಲಿ ಮನೆಗೆ ಬರುವ ವಧುವಿಗೆ ಕಾಲ್ಗೆಜ್ಜೆ ತೊಡಿಸುವ ಪದ್ಧತಿ ಈಗಲೂ ಇದೆ. ಇದು ಕೇವಲ ಶೃಂಗಾರಕ್ಕೆ ಮಾತ್ರವಲ್ಲ. ಮನೆಯ ಏಳಿಗೆ ಹಾಗೂ ಸಂತೋಷವೂ ಇದರಲ್ಲಿ ಅಡಗಿದೆ. ಭಾರತೀಯ ಶಾಸ್ತ್ರದಲ್ಲಿ ಕಾಲ್ಗೆಜ್ಜೆಗೆ ವಿಶೇಷ ಮಹತ್ವವಿದೆ. ಕಾಲ್ಗೆಜ್ಜೆ ದೈವಿಕ ಶಕ್ತಿಯನ್ನು ಆಕರ್ಷಿಸುತ್ತದೆಯಂತೆ. ಇದರಿಂದ ಮನೆಯಲ್ಲಿ ಸದಾ ಸಂತೋಷ, ಶಾಂತಿ ನೆಲೆಸಿರುತ್ತದೆ.

ಕಾಲ್ಗೆಜ್ಜೆ ಶಬ್ದ ಕಾಲಿನ ಬಲವನ್ನು ಹೆಚ್ಚಿಸುತ್ತದೆ. ಅಲ್ಲದೆ ಈ ಕಾಲ್ಗೆಜ್ಜೆ ಶಬ್ದ ಮನೆಯನ್ನು ಪ್ರವೇಶಿಸುವ ವಿವಿಧ ನಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ. ಹಾಗೆ ಪರಿಸರವನ್ನು ಪವಿತ್ರವಾಗಿಟ್ಟಿರುತ್ತದೆ. ಬಂಗಾರ ಹಾಗೂ ಬೆಳ್ಳಿಯನ್ನ ಬಳಸಿ ಕಾಲ್ಗೆಜ್ಜೆಯನ್ನು ಮಾಡಲಾಗಿರುತ್ತದೆ. ಬಂಗಾರ ಅಥವಾ ಬೆಳ್ಳಿ ಲೋಹ ಶರೀರಕ್ಕೆ ಒಳ್ಳೆಯದು. ಅನೇಕ ಖಾಯಿಲೆಗಳನ್ನು ತಡೆಯುವ ಶಕ್ತಿ ಈ ಲೋಹಕ್ಕಿದೆ ಎಂಬುದು ವಿಜ್ಞಾನಿ ಗಳಿಂದಲೂ ಸಾಬೀತಾಗಿದೆ.

LEAVE A REPLY

Please enter your comment!
Please enter your name here