ಹೌದು ಬೆಂಡೆಕಾಯಿ ಕೇವಲ ತಿನ್ನಲು ಮಾತ್ರ ರುಚಿ ಎಂದು ತಿಳಿದಿದ್ದ ನಿಮಗೆ ಅದರಿಂದಾಗುವ ಬೇರೆಯ ಉಪಯೋಗಗಳು ತಿಳಿದಿರಲಿಲ್ಲ. ನಮ್ಮ ಅರೋಗ್ಯ ವೃದ್ಧಿಗೆ ಬೆಂಡೆಕಾಯಿ ಬಹಳ ಸಹಾಯಕಾರಿ, ಇದರಲ್ಲಿ ಹಲವಾರು ಆರೋಗ್ಯಕರ ಗುಣಗಳಿವೆ ಎಂಬುದು ನಮಗೆ ತಿಳಿದಿದೆ. ಈ ಬೆಂಡೆಕಾಯಿಯನ್ನ ತಿನ್ನಲು ಮಾತ್ರವಲ್ಲ ಇದನ್ನ ನಮ್ಮ ಸೌಂದ್ಯರ ವೃದ್ಧಿಗೂ ಸಹ ಬಳಸ ಬಹುದು, ಅದು ಹೇಗೆ ಎಂಬುದು ಇಲ್ಲಿದೆ ನೋಡಿ.

* ಹೆಚ್ಚು ಬಿಸಿಲಿನಲ್ಲಿ ಓಡಾಡುವವರಿಗೆ ಚರ್ಮ ಕಪ್ಪಾಗುತ್ತದೆ. ಈ ಕಪ್ಪು ಚರ್ಮದಿಂದ ಮುಕ್ತಿ ಪಡೆಬೇಕು ಎಂಬುವವರು ಚರ್ಮದ ಮೇಲಿನ ಕಪ್ಪನ್ನ ಹೋಗಿಸಲು ಬೆಂಡೆ ಕಾಯಿಯನ್ನ ಕತ್ತರಿಸಿ ಅದರ ಲೋಳೆಯನ್ನ ಹಚ್ಚಿಕೊಳ್ಳ ಬಹುದು.

* ಕೂದಲಿನ ಸೌಂದರ್ಯ ಹೆಚ್ಚಿಸಲೂ ಬೆಂಡೆಕಾಯಿ ಬಳಸಬಹುದು. ಬೆಂಡೆಕಾಯಿಯನ್ನು ಕತ್ತರಿಸಿ ಬಿಸಿ ನೀರಿನಲ್ಲಿ ನೆನೆಸಿಡಿ. ನೀರು ತಣ್ಣಗಾದ ನಂತರ ಅರ್ಧ ನಿಂಬೆ ರಸವನ್ನು ಸೇರಿಸಿ. ಇದರಲ್ಲಿ ಕೂದಲನ್ನು ತೊಳೆಯಿರಿ. ಹೀಗೆ ಮಾಡಿದ್ರೆ ಕೂದಲು ಕಾಂತಿಯುತವಾಗುತ್ತದೆ.

* ಒಣ ಚರ್ಮ ಹಾಗೂ ಚರ್ಮದ ಇತರೆ ಸಮಸ್ಯೆ ಇರುವವರು ಬೆಂಡೆಕಾಯಿಯನ್ನು ಕತ್ತರಿಸಿ ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ಹತ್ತಿ ಬಟ್ಟೆಯ ಸಹಾಯದಿಂದ ಆ ನೀರನ್ನು ಮುಖಕ್ಕೆ ಹಚ್ಚಿಕೊಳ್ಳಿ. ಮಿಶ್ರಣ ಒಣಗಿದ ನಂತರ ಮುಖವನ್ನು ತೊಳೆಯಿರಿ.

* ಬೆಂಡೆಕಾಯಿಯನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ ಸುಮಾರು 15-20 ನಿಮಿಷಗಳ ಕಾಲ ಬಿಡಿ. ನಂತ್ರ ಮುಖವನ್ನು ತೊಳೆಯಿರಿ. ಇದರಲ್ಲಿ ಮುಖದ ಸುಕ್ಕುಗಳನ್ನು ತೊಡೆದು ಹಾಕುವ ಗುಣ ಇದೆ. ಬೆಂಡೆಕಾಯಿ ಒಳ್ಳೆಯ ಸ್ಕಿನ್ ಮಾಯಶ್ಚರೈಸರ್ ಆಗಿ ಕೆಲಸ ಮಾಡುತ್ತದೆ.

 

LEAVE A REPLY

Please enter your comment!
Please enter your name here