192ಟಿಎಂಸಿ ನೀರು ಬಿಡುವ ಬದಲು 177 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಲು ಪೀಠ ಆದೇಶ ನೀಡಿದೆ. ತಮಿಳುನಾಡಿಗೆ 14.5 ಟಿಎಂಸಿ ನೀರನ್ನು ಕಡಿತಗೊಳಿಸಿದೆ. ಈ ಮೂಲಕ ಕರ್ನಾಟಕ್ಕೆ ನೆಮ್ಮದಿ ಸಿಕ್ಕಂತಾಗಿದೆ..

ಈ ತೀರ್ಪಿನಿಂದ 50 ವರ್ಷಗಳ ಬಳಿಕ ಒಪ್ಪಂದ ರದ್ದಾಗುತ್ತವೆ, ಹಾಗು ಕೇರಳಕ್ಕೆ 30ಟಿಎಂಸಿ ಪುದುಚೇರಿಗೆ 7 ಟಿಎಂಸಿ ನೀರು ಹಂಚಿಕೆ ಸರಿಯಾಗಿಯಾಗಿದೆ, 15 ವರ್ಷಗಳ ಬಳಿಕ ಸುಪ್ರೀಂ ಕೋರ್ಟಿನ ತೀರ್ಪನ್ನು ಮರಪರಿಶೀಲಿಸಬಹುದು.

ಕರ್ನಾಟಕದ ವಾದವನ್ನು ಭಾಗಶಃ ಒಪ್ಪಿದಂತಾಗಿದೆ. 1892 ಹಾಗೂ 1924ರ ಎರಡೂ ಒಪ್ಪಂದಗಳೂ ಸಿಂಧುವಾಗಿದೆ ಎಂದು ಹೇಳಿದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ಕೇಂದ್ರದ ಕೆಲಸ ಎಂದು ಸ್ಪಷ್ಟವಾಗಿ ಸುಪ್ರೀಂಕೋರ್ಟ್ ತಿಳಿಸಿದೆ.

ಕಾವೇರಿ ತ್ರಿಸದಸ್ಯ ಪೀಠದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾ.ದೀಪಕ್ ಮಿಶ್ರಾ, ನ್ಯಾ.ಅಮಿತಾವ್ ರಾಯ್ ಮತ್ತು ನ್ಯಾ.ಎಎಂ. ಕಾನ್ವಿಲ್ಕರ್ ವುಳ್ಳ ತ್ರಿಸದಸ್ಯ ಪೀಠ ಶುಕ್ರವಾರ ತೀರ್ಪು ಪ್ರಕಟಿಸಿದೆ.

LEAVE A REPLY

Please enter your comment!
Please enter your name here