ಹೌದು ಜೀವನದ ಪಾಠವನ್ನು ಹಸಿವು ಅನ್ನೊದ್ದು ಅತಿ ಬೇಗನೆ ಕಲಿಸಿ ಕೊಡುತ್ತದೆ ಅನ್ನಬಹುದು. ಬಡತನದಲ್ಲಿ ಬೆಂದು ನೊಂದು ಹಲವರ ಬಾಯಲ್ಲಿ ಬೋಯಿಸಿಕೊಂಡು ಜೀವನವನ್ನು ಸಾಗಿಸುತ್ತ, ಇವುಗಳ ಮದ್ಯೆ ತನ್ನ ಮಗನನ್ನು ಐಎಎಸ್ ಅಧಿಕಾರಿಯನ್ನಾಗಿ ಮಾಡಬೇಕು ಅನ್ನೋ ಕನಸನ್ನು ಹೊತ್ತು ಶ್ರಮ ಪಟ್ಟ ಆ ಶ್ರಮ ಜೀವಿಗೆ ಆ ದೇವರು ಪ್ರತಿ ಫಲವನ್ನು ಕೊಟ್ಟಿದ್ದಾನೆ..

ಜೀವನದಲ್ಲಿ ಕಷ್ಟ ಇದ್ದರು ತನ್ನ ಮಗನನ್ನು ಒಬ್ಬ ಉತ್ತಮ ಅಧಿಕಾರಿಯನ್ನಾಗಿ ಮಾಡುವ ಛಲವನ್ನು ಇವರು ಬಿಡಲಿಲ್ಲ ಹಾಗು ತನ್ನ ಮಗನನ್ನು ಐಎಎಸ್ ಅಧಿಕಾರಿಯನ್ನಾಗಿ ಮಾಡಿಸುತ್ತೇನೆ ಎಂದು ಕೆಲ ಮಂದಿಯ ಮುಂದೆ ಹೇಳಿದಾಗ, ಇವರು ಅವರಿಂದ ತುಂಬಾನೇ ಅಪಹಾಸ್ಯಕ್ಕೆ ಒಳಗಾಗಿದ್ದಾರೆ. ನೀನು ಒಬ್ಬ ಆಟೋ ಚಾಲಕ ಅನ್ನೋದನ್ನ ಮರೀಬೇಡ ನಿನ್ನ ಮಗ ಐಎಎಸ್ ಅದಿಕಾರಿಯಾಗೋದು ಅಂದರೇನು ಅನ್ನೋ ಕೊಂಕು ಮಾತುಗಳು ಇವರ ಜೀವನದಲ್ಲಿ ತುಂಬಾನೇ ಬಂದವು.

ಯಶಸ್ಸಿನ ದಾರಿಗೆ ಪ್ರತಿಯೊಂದು ಕೊಂಕುಮಾತುಗಳು, ಅಪಹಾಸ್ಯಗಳು, ಮೆಟ್ಟಿಲು ಅಂದುಕೊಂಡು ಕುಗ್ಗದೆ ತನ್ನ ಮಗನ ಯಶಸ್ಸಿಗೆ ಸೂತ್ರದಾರಿಯಾದರು. ಅಲ್ಲದೆ ತನ್ನ ಮಗನ ವಿದ್ಯಾಭ್ಯಾಸಕ್ಕೆ ರಿಕ್ಷಾ ಓಡಿಸಿ ಓದಿಸುತ್ತಿದ್ದರು. ಅಷ್ಟಕ್ಕೇ ಸಾಕಾಗದ ಹಣದ ಸಮಸ್ಯೆಯನ್ನು ತೀರಿಸಲು ತಮ್ಮ ಒಂದು ಎಕರೆ ಜಮೀನನ್ನು ಮಾರಿ ಬಂದಂತ ಹಣವನ್ನು ಮಗನ ಓದಿಗಾಗಿ ಕೊಡುತ್ತಾರೆ.

ಇಷ್ಟೆಲ್ಲ ಕಷ್ಟಗಳನ್ನು ಅರಿತ ಮಗ ಗೋವಿಂದ ಜಾಯಸವಾಲ್ ರಾತ್ರಿ ಹಗಲು ಎನ್ನದೆ ತನ್ನ ಗುರಿಯನ್ನು ಮುಟ್ಟಲು ತುಂಬಾನೇ ಕಷ್ಟ ಪಟ್ಟು ಓದುತ್ತಾರೆ. ಹಾಗು 2006 ರಲ್ಲಿ ತೆಗೆದುಕೊಂಡ IAS ಪರೀಕ್ಷೆಯಲ್ಲಿ 48 ನೆ ರ್ಯಾಂಕ್ ನಲ್ಲಿ ಪಾಸಾಗುತ್ತಾರೆ. ಮತ್ತು ಹಿಂದಿ ಮಾಧ್ಯಮದಲ್ಲಿ ಟಾಪರ್ ಆಗಿ ತೇರ್ಗಡೆಯಾಗುತ್ತಾರೆ. 32 ವರ್ಷದ ಗೋವಿಂದ ಸದ್ಯಕ್ಕೆ ಪೂರ್ವ ದೆಹಲಿಯ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಷ್ಟ ಪಟ್ಟರೆ ಪ್ರತಿ ಫಲ ಸಿಗುತ್ತದೆ ಅನ್ನೋದಕ್ಕೆ ಇವರು ಒಬ್ಬ ಉತ್ತಮ ಉದಾಹರಣೆ ಅನ್ನಬಹುದು.

LEAVE A REPLY

Please enter your comment!
Please enter your name here