ಬಾದುಷಾ ಮಾಡುವುದು ಬಹಳ ಕಷ್ಟ ಎಂದು ಬಹಳಷ್ಟು ಜನ ಭಾವಿಸಿದ್ದಾರೆ ಆದರೆ ಬಾದುಷಾ ಮಾಡುವ ಸುಲಭ ಹಾಗು ಸರಳ ವಿಧಾನ ಇಲ್ಲಿದೆ ನೋಡಿ..

ಬಾದುಷಾ ಮಾಡಲು ಬೇಕಾಗುವ ಪದಾರ್ಥಗಳು:

* ಮೈದಾ- 1 ಕಪ್

* ಮೊಸರು-1/2 ಕಪ್

* ಬೆಣ್ಣೆ-2 ಚಮಚ

* ಅಡುಗೆ ಸೋಡಾ- ಒಂದು ಚಿಟಿಕೆ

* ಸಕ್ಕರೆ- 1 ಕಪ್

* ನೀರು- 1 ಕಪ್

* ಏಲಕ್ಕಿ ಹುಡಿ-1 ಚಿಟಿಕೆ

* ಕರಿಯಲು ಎಣ್ಣೆ

ಬಾದುಷಾ ಮಾಡುವ ವಿಧಾನ

ಒಂದು ಪಾತ್ರೆಗೆ ಮೊಸರು, ಬೆಣ್ಣೆ, ಅಡುಗೆ ಸೋಡಾ, ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಅಗಲವಾದ ಬಾಯಿಯ ಪಾತ್ರೆಯಲ್ಲಿ ಮೈದಾ ಮತ್ತು ಮೊಸರಿನ ಮಿಶ್ರಣವನ್ನು ಹಾಕಿಕೊಂಡು ಹಿಟ್ಟಿನ ಹದಕ್ಕೆ ಬರಲು ಬಿಡಿ. ಹತ್ತು ನಿಮಿಷಗಳ ಕಾಲ ಹಾಗೆ ಇರಲಿ. ನೀರು ಹಾಗೂ ಸಕ್ಕರೆ ಹಾಕಿಕೊಂಡು ಸಕ್ಕರೆಯ ಸಿರಪ್ ಮಾಡಿಕೊಳ್ಳಿ. ಮಧ್ಯಮ ಬೆಂಕಿಯಲ್ಲಿ ಇದನ್ನು ಕುದಿಸಿ ದಪ್ಪಗಿನ ಸಕ್ಕರೆ ಸಿರಪ್ ಪಡೆಯಿರಿ. ಬೆಂಕಿ ನಂದಿಸಿದ ಬಳಿಕ ಸುವಾಸನೆಗಾಗಿ ಇದಕ್ಕೆ ಏಲಕ್ಕಿ ಹುಡಿಯನ್ನು ಹಾಕಿಕೊಳ್ಳಿ.

ಹತ್ತು ನಿಮಿಷದ ಬಳಿಕ ಮೈದಾದ ಹಿಟ್ಟನ್ನು ತೆಗೆದು ಪ್ಯಾಟೀಸ್ ರೀತಿಯಲ್ಲಿ ಮಾಡಿಕೊಳ್ಳಿ. ಇದನ್ನು ಮುಂದಕ್ಕೆ ಉರುಳಿಸಿಕೊಂಡು ಬಾದುಷಾದ ವಿನ್ಯಾಸವನ್ನು ಪಡೆಯಬಹುದು. ಬಾಣಲೆಗೆ ಎಣ್ಣೆಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ಎಣ್ಣೆ ಬಿಸಿಯಾದ ಬಳಿಕ ಅದರಲ್ಲಿ ಬಾದುಷಾವನ್ನು ಕರಿಯಿರಿ. ಮಧ್ಯಮ ಬೆಂಕಿಯಲ್ಲಿಟ್ಟುಕೊಂಡು ಬಾದುಶಾವನ್ನು ಕರಿಯಿರಿ. ಬಾದುಷಾವು ಕಂದು ಬಣ್ಣಕ್ಕೆ ತಿರುಗಿದಾಗ ಹೊರಗೆ ತೆಗೆದು 2-3 ನಿಮಿಷ ಹಾಗೆ ಇಡಿ. ಬಾದುಷಾವನ್ನು ಸಕ್ಕರೆ ಸಿರಪ್‌ಗೆ ಹಾಕಿಕೊಂಡು ರಾತ್ರಿಯಿಡಿ ಅದರಲ್ಲಿ ನೆನೆಯಲು ಬಿಡಿ.

ಇದಕ್ಕೆ ಬಾದಾಮಿ, ಗೋಡಂಬಿಯ ಚೂರುಗಳನ್ನು ಹಾಕಿಕೊಳ್ಳಬಹುದು..

LEAVE A REPLY

Please enter your comment!
Please enter your name here