ಹೌದು ಹೆಣ್ಣು ಮನಸು ಮಾಡಿದರೆ ಏನೆಲ್ಲಾ ಮಾಡಬಹುದು ಅನ್ನೋದು ನಿಮೆಲ್ಲರಿಗೂ ಗೊತ್ತಿರುವ ವಿಷಯ. ತನ್ನ ಕಷ್ಟವನ್ನು ಯಾರ ಮುಂದೆಯೂ ಹೇಳ ಬಯಸದ ತಾಯಿ ಕಡು ಬಡತನದಲ್ಲೂ ತನ್ನ ಮಕ್ಕಳನ್ನು ಉತ್ತಮ ಹುದ್ದೆಯಲ್ಲಿರಿಸ ಬೇಕು ಅಂದು ಕೊಂಡು ಇವರು ಪಟ್ಟ ಕಷ್ಟಗಳು ಅಷ್ಟ್ ಇಷ್ಟಲ್ಲ ..

.

`ತನ್ನ ಮಕ್ಕಳು ಮೂವರು ಅವರಲ್ಲಿ ಒಬ್ಬಳು ಹೆಣ್ಣು ಮಗು ಹಾಗು ಇಬ್ಬರು ಗಂಡು ಮಕ್ಕಳು ಇವರು ಅತಿ ಚಿಕ್ಕವರಿದ್ದಾಗ ಈ ತಾಯಿ ಡಾಕ ಸಿಟಿಗೆ ತೆರಳುತ್ತಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಾನು ದುಡಿಯಲು ಪ್ರಾರಂಭಿಸುತ್ತಾರೆ. ತಾನು ಉಪವಾಸ ಇದ್ದು ಎಷ್ಟೋದಿನ ತನ್ನ ಮಕ್ಕಳಿಗೆ ಊಟ ಕೊಟ್ಟಿದ್ದಾಳೆ ಅಲ್ಲದೆ ತಾನು ಮಾಡುತಿದ್ದ ಕೆಲಸದಲ್ಲೂ ಹೆಚ್ಚು ಸಮಯ ಕೆಲಸ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣ ಕೂಡಿಟ್ಟಿದಳು. ಅಲ್ಲದೆ ಸುಮಾರು 7 ರಿಂದ 8 ಕಿ.ಮೀ ಕೆಲಸಕ್ಕೆ ಪ್ರತಿದಿನ ಓಡಾಡುತ್ತಿದ್ದರು ಒಂದು ದಿನನು ಕೂಡ ಆಟೋ ಬಸ್ಸು ಬಳಸಲಿಲ್ಲ ಕಾರಣ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಉಳಿಸಲು.

ಕೆಲ ಜನ ಹೇಳುವ ಮಾತುಗಳಿಗೆ ತಲೆಕೆಡಿಸಿಕೊಳ್ಳದ ಇವರು ತನ್ನ ಕನಸಿನ ಗುರಿಯನ್ನು ಮುಟ್ಟುವ ಛಲ ಮಾತ್ರ ಬಿಡಲಿಲ್ಲ
ಹಾಗೆ ದುಡಿದ ಹಣದಲ್ಲಿ ಸ್ವಂತಕ್ಕೆ ಔಷಧ ಅಂಗಡಿಯನ್ನು ಇಟ್ಟು ಕೊಳ್ಳುತ್ತಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ತಾಯಿ ತಾನು ಪಡುತ್ತಿದ್ದ ಕಷ್ಟದ ಬಗ್ಗೆ ಮಕ್ಕಳಿಗೆ ಚಿಕ್ಕವರಿಂದಲೇ ಹೇಳುತ್ತಾ ಬರುತ್ತಿದ್ದರು ಅದಲ್ಲದೆ ಮಕ್ಕಳು ತನ್ನ ತಾಯಿ ಪಡುತ್ತಿದ್ದ ಕಷ್ಟಗಳನ್ನೆಲ್ಲ ನೋಡುತ್ತಲೇ ಬರುತ್ತಿದ್ದರು ಹಾಗಾಗಿ ಆ ಮಕ್ಕಳು ಕಷ್ಟ ಪಟ್ಟು ಓದಿ ಇಂದು ಮಗಳು ಡಾಕ್ಟಾರ್ ಹಾಗು ಮಗ ಎಂಜೀನೀಯರ್ ಆಗಿದ್ದಾರೆ. ಮತ್ತು ಚಿಕ್ಕ ಮಗ ಡಾಕ ವಿಶ್ವ ವಿದ್ಯಾಲಯದಲ್ಲಿ ಓದುತ್ತಿದ್ದಾನೆ.

ಅದೇನೇ ಇರಲಿ ತಾಯಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಎಷ್ಟೋ ಸಾರಿ ತಾನು ಉಪವಾಸವಿದ್ದು. ದಿನ ೭-೭ ಕಿ,ಮೀ ಓಡಾಡಿ ಕೆಲಸ ಮಾಡಿ ಹಲವು ಕಷ್ಟ ಪಟ್ಟಿದ್ದಕ್ಕೆ ಆ ದೇವರು ಇವರಿಗೆ ಉತ್ತಮ ಪ್ರತಿಫಲವನ್ನು ಕೊಟ್ಟಿದ್ದಾನೆ.

LEAVE A REPLY

Please enter your comment!
Please enter your name here