ಹೌದು ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಗುರಿ ಇದ್ದೆ ಇರುತ್ತದೆ. ಆ ಗುರಿಯನ್ನು ತಲುಪಲು ಶ್ರಮ ಪಡಬೇಕು. ಶ್ರಮ ಪಟ್ಟಾಗಲೇ ಅದಕ್ಕೆ ಪ್ರತಿಫಲ ಸಿಗುವುದು. ಗಂಡ ಇಲ್ಲದ ಈ 22 ವರ್ಷದ ಹೆಣ್ಣು ತಾನು ಆಟೋ ಓಡಿಸಿ ತನ್ನ ಚಿಕ್ಕ ಮಗುವಿನೊಂದಿಗೆ ಜೀವನ ಸಾಗಿಸುತ್ತಿದ್ದಾಳೆ.

22 ವರ್ಷ ವಯಸ್ಸಿನ ಯೆಲ್ಲಮ್ಮ ಅವರು 18 ವಯಸ್ಸಿನಲ್ಲಿ ಮದುವೆಯಾಗಿದ್ದರು. ಆದರೆ ಇಂದು ಅವರ ಜೊತೆ ಪತಿ ಇಲ್ಲ. ತನ್ನ ಜೀವನ ತುಂಬಾನೇ ಕಷ್ಟಕರವಾಗಿದೆ. ಜೀವನ ನಡೆಸಲು ತನ್ನ ಸಂಬಂದಿಕರ ಬೆಂಬಲ ಪಡೆಯದೇ ತಾನು ಸ್ವಾವಲಂಬಿಯಾಗಿ ಜೀವನ ನಡೆಸ ಬೇಕು ಹಾಗು ಬಡತನದಲ್ಲಿ ಎಷ್ಟೋ ಜನ ಕಷ್ಟ ಪಡುತ್ತಿದ್ದಾರೆ. ನನ್ನ ಜೀವನ ಕಥೆಗಿಂತ ಬೇರೆಯವರು ಒಂದೊತ್ತಿನ ಊಟಕ್ಕೂ ಎಷ್ಟೋ ವ್ಯಥೆ ಪಡುತ್ತಿದಾರೆ. ಅಂತಹ ನೊಂದವರ ಬಾಳಿಗೆ ನಾನು ಬೆಳಕಾಗಬೇಕು ಅನ್ನೋ ಅಸೆ ಇವರದ್ದು. ತಾನು ಕಟ್ಸ ಪಟ್ಟು ತನ್ನ ಜೀವನಕ್ಕಾಗಿ ಚಿಕ್ಕವಯಸ್ಸಿನ ಮಗನೊಂದಿಗೆ ಆಟೋ ಓಡಿಸುವ ವೃತ್ತಿಯನ್ನು ಪ್ರಾರಂಭಿಸಿದ್ದಾರೆ.

ತಾನು ಹೆಣ್ಣು ಆಗಿರುವುದರಿಂದ ತನಗೆ ಬಾಡಿಗೆಗೆ ಆಟೋ ಕೊಡಲು ಯಾರು ಮುಂದೆ ಬರುವುದಿಲ್ಲ. ಆದರೂ ಹೇಗೋ ಮಾಡಿ ದಿನದ ಲೆಕ್ಕಕ್ಕೆ 130 ಬಾಡಿಗೆಯ ರೀತಿಯಲ್ಲಿ ಆಟೋ ಪಡೆಯುತ್ತಾರೆ.

ಪ್ರತಿ ದಿನ ಬೆಳಗ್ಗೆ 6 ರಿಂದ ಸಂಜೆ 8 ರವರೆಗೆ ಆಟೋ ಓಡಿಸುತ್ತಾರೆ. ಬಿಡುವಿನ ಸಮಯದಲ್ಲಿ ನ್ಯೂಸ್ ಪೇಪರ್ ಹಾಗು ನಿಯತಕಾಲಿಕೆಗಳನ್ನು ಓದುತ್ತಾರೆ. ತಾನು ಐಎಎಸ್ ಅದಿಕಾರಿಯಾದರೆ ತನ್ನ ರೀತಿಯಲ್ಲಿರುವ ಅದೆಷ್ಟೋ ಹೆಣ್ಣು ಮಕ್ಕಳಿಗೆ ಸಹಾಯ ಮಾಡಬಹುದು ಅನ್ನುತ್ತಾರೆ.

ತಾನು ಮಾಡುವ ವೃತ್ತಿ ಯಲ್ಲಿ ಎಷ್ಟೋ ಕಷ್ಟ ಬಂದರು ಕುಗ್ಗದೆ, ಪ್ರತಿದಿನ ತನ್ನ ಕೆಲಸವನ್ನು ನಿಭಾಯಿಸುತ್ತಿದ್ದಾರೆ. ತಾನು ಹೆಣ್ಣಾಗಿರುವ ಕಾರಣಕ್ಕೆ ಕೆಲ ಜನ ಇವರನ್ನು ಬೇರೆಯ ರೀತಿಯಲ್ಲಿ ನೋಡುತ್ತಾರೆ ಅಲ್ಲದೆ ಕೆಲವರು ಇವರು ಮಾಡುವ ಕೆಲಸಕ್ಕೆ ಗೌರವಿಸುತ್ತಾರೆ. ಇವೆಲ್ಲವುಗಳ ನಡುವೆ ತನ್ನ ಗುರಿಯನ್ನು ಮುಟ್ಟುವ ಪ್ರಯತ್ನ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಿಸುತ್ತಲೇ ಇರುತ್ತಾರೆ.  ಅದೇನೇ ಇರಲಿ ಇವರ ಕಷ್ಟದ ದಿನಗಳು ಹೋಗಿ ಇವರ ಜೀವನದಲ್ಲಿ ಒಳ್ಳೆಯದಿನಗಳು ಬರಲಿ ತಾನು ಕಂಡಿರುವ ಕನಸು ಕೂಡ ನನಸಾಗಲಿ ಅನ್ನೋದೇ ನಮ್ಮ ಆಶಯ…

 

LEAVE A REPLY

Please enter your comment!
Please enter your name here