ಹೌದು ಅರುಣಾಚಲ ಪ್ರದೇಶದಲ್ಲಿ ಕಾಣಸಿಗುವ ಈ ಹಳ್ಳಿ ಏಷ್ಯಾದಲ್ಲೇ ಈಗ ಶ್ರೀಮಂತ ಹಳ್ಳಿ ಎಂದು ಹೆಸರುವಾಸಿಯಾಗಿದೆ ಕಾರಣ ಏನು ಗೊತ್ತೇ?  ಕೇಂದ್ರದ ರಕ್ಷಣಾ ಸಚಿವಾಲಯವು ಬೊಮ್ಜ ಹಳ್ಳಿಯಲ್ಲಿ 200.056 ಎಕರೆ ಭೂ ಸ್ವಾಧೀನ ಮಾಡಿರುವ ಕಾರಣ ಪರಿಹಾರ ಧನವಾಗಿ 40,80,38,400 ರೂ. ಗಳನ್ನು ಬಿಡುಗಡೆ ಮಾಡಲಾಗಿದೆ. ಹಳ್ಳಿಯ ಎಲ್ಲಾ ಕುಟುಂಬಗಳಿಗೆ ಪರಿಹಾರ ಹಣವನ್ನು ಕೊಡಲಾಗಿದ್ದು, ಒಂದು ಕುಟುಂಬಕ್ಕೆ 2.44 ಕೋಟಿ ರೂ. ಪರಿಹಾರ ಸಿಕ್ಕಿದರೆ ಮತ್ತೊಂದು ಕುಟುಂಬಕ್ಕೆ 6.73 ಕೋಟಿ ರೂ. ಸಿಕ್ಕಿದೆ. ಇದರಿಂದ ಬೊಮ್ಜ ಕೋಟ್ಯಾಧಿಪತಿಗಳ ಹಳ್ಳಿಯಾಗಿ ಬದಲಾಗಿದೆ.

ಇದರ ಮೂಲಕ ಈ ಹಳ್ಳಿಯು ಕೇಂದ್ರ ಸರ್ಕಾರದ ಕೃಪೆಯಿಂದ ಅತೀ ಶ್ರೀಮಂತ ಹಳ್ಳಿಯಂದು ಹೆಸರುವಾಸಿಯಾಗಿದೆ, 31 ಕುಟುಂಬಗಳಿರುವ ಹಳ್ಳಿಯಲ್ಲಿ, 29 ಕುಟುಂಬಗಳಿಗೆ ತಲಾ 1,09,03,813.37 ರೂ. ಗಳನ್ನು ಕೊಡಲಾಗಿದೆ. ತಾವಾಂಗ್ ಗ್ಯಾರಿಸನ್‍ನ ಪ್ರಮುಖ ಯೋಜನೆ ಘಟಕಗಳನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಭಾರತೀಯ ಸೇನೆಯು ಈ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದೆ.

ಈ ಹಣವನ್ನು ಸೋಮವಾರ ಅರುಣಾಚಲಪ್ರದೇಶದ ಮುಖ್ಯಮಂತ್ರಿ ಪೆಮಾ ಖಾಂಡು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತೀಯ ಸೇನೆಯು ಭೂಸ್ವಾಧೀನ ಪರಿಹಾರವನ್ನು ಮತ್ತಷ್ಟು ನೀಡಲಿದೆ ಎಂದು ಹೇಳಿದರು. ಈ ಕಾರಣದಿಂದ ಇಡೀ ದೇಶವೇ ಬೊಮ್ಜಾ ಹಳ್ಳಿಯ ಕಡೆ ಹುಬ್ಬೇರಿಸಿ ನೋಡುತ್ತಿದೆ..

LEAVE A REPLY

Please enter your comment!
Please enter your name here