ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬಿದರ ಹೊಸಹಳ್ಳಿ ಗ್ರಾಮದ ನಿವಾಸಿ ಮಹೇಶ್ ಎಂಬವರು ತಮ್ಮ ಜಮೀನಿನಲ್ಲಿ 8 ವರ್ಷಗಳ ಹಿಂದೆ ಮನೆ ಕಟ್ಟಲು ಆರಂಭಿಸಿದ್ದರು. ಆದರೆ ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲಿ ಹುತ್ತ ಬೆಳೆಯಲಾರಂಭಿಸಿತ್ತು. ಮೊದಲಿಗೆ ಮಹೇಶ್ ಹುತ್ತವನ್ನು ಕಿತ್ತು ಹಾಕಿ ಮನೆ ನಿರ್ಮಾಣದ ಕಡೆ ಗಮನಕೊಟ್ಟರು. ಆದರೆ ನಂತರ ಮಹೇಶ್ ಅವರ ಆರ್ಥಿಕ ಸಂಕಷ್ಟ ಹೆಚ್ಚಿ, ಮಕ್ಕಳಿಗೆ ಆರೋಗ್ಯದ ಸಮಸ್ಯೆ ಶುರುವಾಗಿತ್ತು. ಇತ್ತೀಚಿಗೆ ಮನೆ ನಿರ್ಮಾಣ ಕಾರ್ಯವೂ ಮುಗ್ದಿತ್ತು ಆದರೆ ಮನೆಯಲ್ಲಿ ಹುತ್ತ ಬೆಳೆಯುವುದು ಮಾತ್ರ ನಿಂತಿಲ್ಲ!

ಕಷ್ಟ ಪಟ್ಟು ಕಟ್ಟಿದ ಮನೆಯಲ್ಲಿ ಈ ರೀತಿಯಾಗುತ್ತಿರುವುದಕ್ಕೆ ಮಹೇಶ್ ಬೇಸರ ವ್ಯಕ್ತಪಡಿಸುತ್ತಾರೆ. ಈ ಬೆಳವಣಿಗೆಯಿಂದ ಹೆದರಿರೋ ಮಹೇಶ್ ಮನೆಯೊಳಗೆ ಬೆಳೆದ ಹುತ್ತವನ್ನು ಹಾಗೇ ಬಿಟ್ಟಿದ್ದಾರೆ. ಒಂದು ಬಾರಿ ಹಾವು ಕಾಣಿಸಿಕೊಂಡಿದ್ದು, ಹುತ್ತ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಅರ್ಧದಷ್ಟು ಪೂರ್ಣಗೊಂಡಿರುವ ಮನೆಯಲ್ಲಿ ಕಳೆದೊಂದು ವರ್ಷದಿಂದ ವಾಸಿಸುತ್ತಿದ್ದು, ಹುತ್ತಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here