ತಾಯಿಯ ವಾತ್ಸಲ್ಯ ಅನನ್ಯ ಸದೃಶವಾದುದು ಅದನ್ನು ಕುಟುಂಬದ ಇನ್ನಿತರ ಸದಸ್ಯರ ಪ್ರೀತಿಯೊಂದಿಗಾಗಲಿ ಅಥವಾ ಸಮಾಜದ ಇತರರ ಪ್ರೀತಿಯೊಂದಿಗಾಗಲಿ ಹೋಲಿಸಲಾಗದು.ಅದು ಅತ್ಯಂತ ಪರಿಶುದ್ಧ ಹಾಗೂ ದೀರ್ಘಕಾಲಿನವಾದುದು.

ತಾಯಿಯು ತನ್ನ ಮಗುವಿನ ಬಗೆಗೆ ವಹಿಸುವ ಕಾಳಜಿಯಿಂದ ಮಗ/ಮಗಳು ದೊಡ್ಡವರಾಗಿ ಬೆಳೆಯುತ್ತಾರೆ.ತಾಯಿಯು ಮಗುವಿಗೆ ನಡೆದಾಡಲು ಹಾಗೂ ಮಾತನಾಡಲು ಪ್ರೇರೆಪಿಸುವುದರ ಮುಖಾಂತರ ಮೊದಲ ಗುರುವೇನಿಸಿಕೊಳ್ಳುವಳು.ಇತರರೊಡನೆ ಸಂಪರ್ಕಿಸಲು ಯಾವ ರೀತಿ ಮಾತನಾಡಬೇಕೆಂಬ ರೀತಿ,ರಿವಾಜು ಕಲಿಸಿದಳು ನನ್ನ ತಾಯಿ.

ಈ ಭೊಮಿಯ ಮೇಲೆ ತಾಯಿಯೆ ಮಾನವನ ರೂಪದಲ್ಲಿರುವ ದೇವತೆ ಹಾಗೂ ತಾಯಿಗಿಂತ ಮಿಗಿಲಾದ ದೇವರಿಲ್ಲವೆಂದು ಹೇಳಿರುವುದು ಸತ್ಯ,ನಿಷ್ಠೆ, ಅನುಕಂಪ ಮುಂತಾದ ಎಲ್ಲ ಉತ್ತಮ ಗುಣಗಳ ಗಣಿ ಆಕೆ.ತಾಯಿಮಾತ್ರ ತನ್ನೆಲ್ಲ ಮಕ್ಕಳನ್ನು ಸಮಭಾವದಿಂದ ನೋಡುವಳು.ತನ್ನ ಮಿತಿಯಿಲ್ಲದ ವಾತ್ಸಲ್ಯದಿಂದ ಮಗುವಿನಲ್ಲಿ ಸನ್ನಡತೆಗಳನ್ನು ರೂಪಿಸುವಳು.

ಮಾತೆಯನ್ನು ಅತೀವ ವಾತ್ಸಲ್ಯ ಹಾಗೂ ಅತ್ಯಂತ ಗೌರವದಂದ ನಡೆಸಿಕೊಳ್ಳೋಣ.ಮಕ್ಕಳು ಇಂದು ಏನು ಆಗಿರುವರೋ ಅದಕ್ಕೆ ಅವರ ಮಾತೆಯ ತ್ಯಾಗವೆ ಕಾರಣ.ಆದುದರಿಂದ ಮಗು ಕುಟುಂಬದ ಇತರ ಸದಸ್ಯರ ಮರ್ಜಿಯಲ್ಲಿರಬೇಕಾಗುತ್ತದೆ.

ಇನ್ನೂ ಕೆಲ ಮಾತೆಯರು ತಮ್ಮ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊರಗಿನವರಿಗೆ ವಹಿಸಬೇಕಾದಂತಹ ಪರಿಸ್ಥಿತಿ ನಿಭಾಯಿಸಬೇಕಾಗುತ್ತದೆ. ಅವರಿಗೆ ಅವರ ಸೇವೆಗಳಿಗಾಗಿ ಹೆಚ್ಚಿನ ವೇತನ ನೀಡಿದರೂ,ಅವರು ಮಕ್ಕಳನ್ನು ಬೆಳೆಸುವಲ್ಲಿ ಹೆಚ್ಚಿನ ಮುತುವರ್ಜಿವಹಿಸುವುದಿಲ್ಲ.ಹಲವಾರು ವಿದ್ಯಾವಂತ ದುಡಿಯುವ ಮಾತೆಯರು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅದಕ್ಕೆ ಪರಿಹಾರವೆ ಇಲ್ಲದಂತಾಗಿದೆ ಅವರು ಇತರರನ್ನು ಅವಲಂಬಿಸಲೇಬೇಕು. ಇದು ಇಂದಿನ ಮಾತೆಯರ ತೂಂದರೆಯಾಗಿದೆ.

LEAVE A REPLY

Please enter your comment!
Please enter your name here