ಆಧುನಿಕ ದಾಸೋಗಿ ಮಶೀನ್‍ಗಳನ್ನು ತಯಾರಿಸುವಲ್ಲಿ ನಿಪುಣ ನಮ್ಮ ಬಾಬುರಾವ. ನಾಗರಿಕ ಸಮಾಜ ಆಧುನಿಕತೆಯತ್ತ ಸಾಗಿದ ಹಾಗೆ ದಾನ, ದಾಸೋಗಗಳು ನಿಂತು ಹೋಗುವುದು ಸಹಜ. ಆದರೆ ವಿಜಯಪುರದ ಸಿಂದಗಿ ರಸ್ತೆಯಲ್ಲಿರುವ ದೀಪಕ ಇಂಜನೀಯರಿಂಗ್ ವರ್ಕ್ಸ್ ಮತ್ತು ಔದಂಗಬರವಾಸಿ ದತ್ತ ಮಂದಿರದ ನಿರ್ವಾಹಕರಾದ ಶ್ರೀ ಬಾಬುರಾವ ಜಾಧವ ಇವರು ಹೊಸ ಹೊಸ ಮಶೀನ್‍ಗಳನ್ನು ತಮ್ಮ ವರ್ಕಶಾಪ್‍ಗಳಲ್ಲಿ ತಯಾರಿಸಿ ಮಶೀನಗಳನ್ನು ಸಣ್ಣ ವ್ಯಾಪಾರ ನಡೆಸುವವರಿಗೆ ಇವುಗಳನ್ನು ಕೊಡುತ್ತಾರೆ. ಅವುಗಳಿಂದ ಅವರು ಸ್ವಾವಲಂಬಿ ಬದುಕನ್ನು ಬದುಕುತ್ತಿದ್ದಾರೆ.  । ಇದನ್ನೂ ಓದಿ : ಅಂದು ಭಾರತೀಯ ಬ್ಯಾಸ್ಕೆಟ್ಬಾಲ್ ಆಟಗಾರನಾಗಿದ್ದ ಇವರು ಇಂದು 300 ಕೋಟಿಯ ಟ್ರಾವೆಲ್ಸ್ ಕಂಪನಿಯ ಒಡೆಯನಾಗಿದ್ದು ಹೇಗೆ ಗೋತ್ತಾ.?

82ರ ಇಳಿ ವಯಸ್ಸಿನಲ್ಲಿಯೂ ಯುವಕರನ್ನು ನಾಚಿಸುವಂತೆ ಅತೀ ಹುರುಪಿನಿಂದ ಕೆಲಸದಲ್ಲಿ ನಿರಂತರಾಗುತ್ತಾರೆ. ಅಂಗವಿಕಲರಿಗೆ ತ್ರಿಚಕ್ರ ವಾಹನ ತಯಾರಿಸಿ ಕೊಡುತ್ತಾರೆ. ಮತ್ತು ಯಾವುದೇ ಶಾಲೆ ಕಾಲೇಜಿನ ವಿಜ್ಞಾನ ಪರಿಕರಗಳನ್ನು ತಯಾರಿಸಿ ಕೊಡುವಲ್ಲಿ ಸಿದ್ದಹಸ್ತರು. ಯಾವುದೇ ತರಹದ ಜಟಿಲವಾದಂತಹ ಯಂತ್ರಗಳನ್ನು ರಿಪೇರಿ ಮಾಡಿಕೊಡುತ್ತಾರೆ ಇವರ ಕಾರಖಾನೆಯಲ್ಲಿ ಪ್ರತಿನಿತ್ಯ ಏರಕಾಂಪ್ರೆಸ್‍ಗಳನ್ನು ತಯಾರಿಸಿ ಕೊಡುತ್ತಾರೆ.

ಇವರ ಕಾರಖಾನೆಯಲ್ಲಿ ಕೆಲಸ ಮಾಡುವವರು ಮತ್ತು ಬಂದ ಗ್ರಾಹಕರಿಗೆ ನಿತ್ಯ ದಾಸೋಗವನ್ನು ಏರ್ಪಡಿಸುತ್ತಾರೆ. ತಮ್ಮ ಕಾರ್ಖಾನೆಯಲ್ಲಿಯೇ ದತ್ತ ಮಂದಿರವನ್ನು ನಿರ್ಮಿಸಿದ್ದಾರೆ. ದಿನನಿತ್ಯ ಪೂಜೆ ಕಾರ್ಯಗಳನ್ನು ನಡೆಸುತ್ತಾರೆ. ಮತ್ತು ಪ್ರತಿ ಗುರುವಾರ ನೂರಾರು ಜನರಿಗೆ ಅನ್ನ ದಾಸೋಹ ಏರ್ಪಡಿಸುತ್ತಾರೆ.

ಪ್ರತಿದಿನ ಇವರನ್ನು ಕಾಣಲು ಭಕ್ತರ ದಂಡು ಬರುತ್ತದೆ. ಮತ್ತು ತಮ್ಮ ಅಹವಾಲುಗಳನ್ನು ಇವರ ಮುಂದೆ ಹೇಳುತ್ತಾರೆ. ಇವರು ತಕ್ಕದಾದಷ್ಟು ಸಹಾಯ ಹಸ್ತ ನೀಡುತ್ತಾರೆ. ಇವರು ಬಡವ- ಬಲ್ಲಿದ, ಜಾತಿ ಎಂಬ ಬೇಧ ಭಾವ ಮಾಡದೆ ಎಲ್ಲರಿಗೂ ಸಹಾಯ ಮಾಡುವ ಬಾಬುರಾವ ಜಾಧವ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರಿಂದ ಎಲ್ಲರೂ ಇವರಿಗೆ ಬಾಬುರಾವ ಅಜ್ಜ ಎಂದೇ ಕರೆಯುತ್ತಾರೆ.

ರಮೇಶ ಭಕ್ತನ ಹೇಳಿಕೆ : ನಾನು ಪ್ರತಿ ಗುರುವಾರ ದತ್ತನ ಗಾಡಿಗೆ ಬರುತ್ತೇನೆ. ಬಾಬುರಾವ ಮಾಡುವ ದಾಸೋಹದಲ್ಲಿ ಪಾಲ್ಗೊಳ್ಳುತ್ತೇನೆ. ಮೊದಲು ವ್ಯಸನಿಯಾಗಿದ್ದ ನಾನು ಬಾಬುರಾವ ಅವರು ಬಗ್ಗೆ ಮಾರ್ಗ ತೋರಿಸಿದ್ದಾಗ ಎಲ್ಲಾ ದುಶ್ಚಟಗಳನ್ನು ಬಿಟ್ಟಿದ್ದೇನೆ. । ಇದನ್ನೂ ಓದಿ : ಎಲೆಕ್ಷನ್ ಸಮಯಲ್ಲಿ ಅಕ್ರಮ ಹಣ ಸಾಗಾಟ ಮಾಡುವ ದೊಡ್ಡ ಕುಳಗಳಿಗೆ ಭರ್ಜರಿ ಶಾಕ್ ಕೊಡಲು ಮಾಸ್ಟರ್ ಪ್ಲಾನ್ ಮಾಡಿದ ಐಪಿಎಸ್ ರೂಪಾ.!! ಆ ಪ್ಲಾನ್ ಏನು ಅಂತೀರಾ.?? ಈ ಸುದ್ದಿ ಓದಿ.

LEAVE A REPLY

Please enter your comment!
Please enter your name here