ಹೌದು ತನ್ನ ಪ್ರಾಣವನ್ನು ಲೆಕ್ಕಿಸದೆ ಆ ಚಿಕ್ಕ ಮಕ್ಕಳ ಪ್ರಾಣವನ್ನು ಈ ಚಾಲಕ ರಕ್ಷಿಸಿದ್ದು ಹೇಗೆ ಗೋತ್ತಾ ? ನಿಜಕ್ಕೂ ಈತನ ಕೆಲಸಕ್ಕೆ ಮೆಚ್ಚಲೇ ಬೇಕು. ಇಳಿಜಾರಿನ ಪ್ರದೇಶದಲ್ಲಿ ರಿವರ್ಸ್ನಲ್ಲಿ ಶಾಲಾ ವ್ಯಾನ್ ಚಲಿಸುತ್ತಿದಾಗ. ಆ ವ್ಯಾನ್ ನಿಲ್ಲಿಸಲು ಏನು ತೋಚದೆ ಇದ್ದಾಗ ತಾನು ಅಡ್ಡಲಾಗಿ ವ್ಯಾನ್ ನ ಚಕ್ರಕ್ಕೆ ಮಲಗಿ 25 ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿದ್ದಾನೆ.

ಛತ್ತೀಸ್ಗಡ್ನ ರಾಯ್ಪುರದಲ್ಲಿ ನಡೆದಂತ ಘಟನೆ ಇದು. ಈ ಚಾಲಕ ಶಾಲಾ ವ್ಯಾನ್ ಅನ್ನು ಪಸ್ಟ್ ಗೇರ್ ನಲ್ಲಿ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ. ವ್ಯಾನ್ ನಲ್ಲಿದ್ದ ಮಕ್ಕಳು ಪಸ್ಟ್ ಗೇರ್ನಿಂದ ತಗೆದು ನ್ಯೂಟ್ಲ್ ಮಾಡುತ್ತಾರೆ. ವ್ಯಾನ್ ಇಳಿಜಾರಿನಲ್ಲಿದ್ದ ಕಾರಣ ಹಿಂಬದಿಯಲ್ಲಿ ಚಲಿಸಲು ಪ್ರಾರಂಭಿಸುತ್ತದೆ. ಇದನ್ನು ಕಂಡ ಮತ್ತೊಂದು ವಾಹನದ ಚಾಲಕ ಶಿವು ಯಾದವ್ ಅದನ್ನು ತಡೆಯಲು ಕಲ್ಲು ಮುಂತಾದವುಗಳನ್ನು ಹುಡಿಕಿದ್ದಾನೆ ಏನು ಸಿಗದ ಕಾರಣ, ಏನು ಮಾಡಬೇಕು ಅನ್ನೋದನ್ನು ತೋಚದೆ ಇದ್ದಾಗ ಆ ವ್ಯಾನ್ ನ ಚಕ್ರಕ್ಕೆ ಅಡ್ಡಲಾಗಿ ಮಲಗಿ ವ್ಯಾನ್ ನಿಲ್ಲಿಸುತ್ತಾನೆ. ನಿಜಕ್ಕೂ ಈತನ ಆ ಸಾಹಸಕ್ಕೆ ಮೆಚ್ಚಲೇ ಬೇಕು ಅಪಾಯದ ಹಾದಿ ಹಿಡಿದಿರುವ ವ್ಯಾನ್ ಅನ್ನು ತನ್ನ ಪ್ರಾಣವನ್ನು ಲೆಕ್ಕಿಸದೆ ಮಕ್ಕಳನ್ನು ಉಳಿಸಿದ್ದಾನೆ.

LEAVE A REPLY

Please enter your comment!
Please enter your name here